ದೆಹಲಿ ಪ್ರವಾಸ, ಪ್ರಯಾಸ-3
"ಮಥುರಾ" ಶ್ರೀ ಕ್ರೃಷ್ಣನ ಜನ್ಮ ಸ್ಥಾನ. ಎಂದಾದರೊಮ್ಮೆ ನೋಡಬೇಕು ಅಂದುಕೊಂಡ ಸ್ಥಳ. ಆ ಸ್ಥಳಕ್ಕೆ ಭೇಟಿ ಕೊಡುವ ಭಾಗ್ಯ ಬಂದದ್ದು. ಒಂದು ಪವಾಡವೆಂದೇ ಹೇಳಬೇಕು. "ಅಯ್ಯೋ, ಅದರಲ್ಲೇನಿದೆ. ಟೂರ್ ಪ್ಯಾಕೇಜ್ ಕಾಯ್ದಿರಿಸಿ ಹೋದರಾಯ್ತು" ಅಂತ ನೀವು ಅಂದುಕೊಳ್ಳಬಹುದು. ಆದರೆ ಪ್ರವಾಸ ಕ್ಕೆ ಹೋಗುವ ನಿರ್ಧಾರ ಮಾಡದೆ ಅನಿರೀಕ್ಷಿತವಾಗಿ ಬಂದ ಅವಕಾಶದಲ್ಲಿ ಹೋಗುವದರಲ್ಲಿ ಇರುವ ಮಜಾ ಇದೆಯಲ್ಲ, ಅದರ ಅನುಭೂತಿ ಬೇರೆಯೇ ರೀತಿ ಇರುತ್ತದೆ. ಬೆಳ್ಳಂಬೆಳಗ್ಗೆ ಎದ್ದ ನಮ್ಮ ಸವಾರಿ ಮಥುರಾ ಕಡೆಗೆ ಹೊರಟಿತು. ನಾವು ಉಳಕೊಂಡ ಸ್ಥಳದಿಂದ ಸುಮಾರು 150 ಕಿ.ಮೀ ದೂರದಲ್ಲಿತ್ತು ಮಥುರಾ. ದಾರಿಯ ಮಧ್ಯ ದಲ್ಲಿ ಮೊದಲೇ ಕಟ್ಟಿ ಕೊಂಡ ಚಿತ್ರಾನ್ನ,ವಡೆಯಿಂದ ಹೊಟ್ಟೆ ತುಂಬಿಸಿಕೊಂಡು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಸಮಯ ಕಳೆಯಲು ಅಂತ್ಯಾಕ್ಷರಿ ಆಡಿದೆವು. ಮೊದಲು ಭೇಟಿ ನೀಡಿದ ಸ್ಥಳ ಕ್ರಷ್ಣನ ಅನೇಕ ಮಂದಿರಗಳಲ್ಲಿ ಒಂದಾದ, ಔರಂಗಾಜೇಬನ ಆಳ್ವಿಕೆಗೆ ತುತ್ತಾದ,ವ್ರೃಂದಾವನ ಧಾಮದ ಗೋವಿಂದ ದೇವ್ ಜೀ ಮಂದಿರ . ಅಲ್ಲಿ ಮಂಗಗಳ ಹಾವಳಿ ಹೆಚ್ಚು. ಆದ್ದರಿಂದ ತಿಂಡಿ ತಿನಿಸುಗಳ ಚೀಲವನ್ನು ಬಸ್ ನಲ್ಲೇ ಬಿಟ್ಟು ತೆರಳಬೇಕೆಂದು ಆಯೋಜಕರು ಸೂಚಿಸಿದರು.ಅವರ ಸೂಚನೆ ಪಾಲಿಸಿದ ನಾವುಗಳು ಮಂದಿರದ ದಾರಿಯನ್ನು ತುಳಿದೆವು.ಮಂದಿರದ ಹೊರಾಂಗಣ ವಿನ್ಯಾಸ ಅದರ ಪ್ರಾಚೀನತೆಯನ್ನು ಸಾರುತ್ತಿತ್ತು. ಕೆಂಪು ಕಲ್ಲಿನಿಂದ ಕಟ್ಟಲಾದ ಬ್ರೃಹತ್ ಕಟ್ಟಡ,ಅಂತೆಯೇ ಬ್ರೃಹತ್ತಾದ ಪ್ರವೇಶ ದ್ವಾರ. ಒಳ ಪ್ರವೇಶವಾಗುತ್ತಿದ್ದಂತೆ ತಂಪಿನ ಅನುಭವವಾಯಿತು. ಮೊದಲು ದೇವರ ದರ್ಶನ. "ಬೋಲೋ ಕೃಷ್ಣ ಭಗವಾನ್ ಕೀ" ಅಲ್ಲಿನ ಅರ್ಚಕರು ಎಂದರು. "ಜೈ" ನಾವು ನುಡಿದೆವು. "ಅಚ್ಛಾ, ಅಬ್ ಸಬ್ ಲೋಗ್ ತಾಲಿಯಾ ಬಜಾವೋ" (ಚಪ್ಪಾಳೆ ತಟ್ಟಿ) ಔರ್ ಅಬ್ ಸಬ್ ಝೋರ್ ಸೆ ಹಸೋ( ಜೋರಾಗಿ ನಕ್ಕು ಬಿಡಿ) ಎಂದಾಗ ನನಗೆ ವಿಚಿತ್ರವೆನಿಸಿತು. ಕ್ರಷ್ಣ ತನ್ನ ಭಕ್ತರ ಮಂದಹಾಸದಿಂದ, ನ್ರೃತ್ಯದಿಂದ ತ್ರಪ್ತನಾಗುತ್ತಾನೆಂದು ನಂತರ ಅವರ ಮಾತಿನಿಂದ ತಿಳಿಯಿತು. ಅಲ್ಲಿನ ಕೆಲವು ಭಕ್ತರು ಕ್ರಷ್ಣನನ್ನು ಭಜಿಸುತ್ತಾ ನ್ರೃತ್ಯಿಸಲಾರಂಭಿಸಿದರು.
ಕಪಿಗಳ ಚೇಷ್ಟೆಯನ್ನು ಕೆಲಕಾಲ ವೀಕ್ಷಿಸಿದ ನಂತರ ನಮ್ಮ ಪಯಣ ಮುಂದುವರೆಯಿತು.ಮುಂದಿನ ನಮ್ಮ ಭೇಟಿ ಶ್ರೀ ಕ್ರಷ್ಣ ಜನ್ಮ ಭೂಮಿ ಮಂದಿರಕ್ಕೆ ಕ್ರಷ್ಣ ಹುಟ್ಟಿದ ಕಾರಾಗ್ರಹವನ್ನು ಮಂದಿರ ವಾಗಿ ಪರಿವರ್ತನೆ ಮಾಡಲಾಗಿದೆ ಎಂದು ಹೇಳುತ್ತಾರೆ. ಈ ಮಾತನ್ನು ಧ್ರಢೀಕರಿಸುವಂತೆ ಮಂದಿರ ಪ್ರವೇಶಿಸುವ ಸ್ಥಳವು ಗಟ್ಟಿಯಾದ ಕಲ್ಲು ಗಳಿಂದ ,ಯಾರೂ ಸುಲಭದಲ್ಲಿ ಭೇದಿಸಲು ಸಾಧ್ಯವಿಲ್ಲದಂತೆ ನಿರ್ಮಾಣಗೊಂಡಿದೆ. ಈ ಮಂದಿರದಲ್ಲಿ ಛಾಯಾಗ್ರಹಣವನ್ನು ನಿಷೇಧಿಸಲಾಗಿದೆ.ದೇವರ ದರ್ಶನದ ನಂತರ ಹೊರಬಂದ ನಾವು ಖರೀದಿಗೆ ಮುಂದಾದೆವು. ತದನಂತರ ಅಂಗಡಿಯಲ್ಲಿ ಲಸ್ಸಿ ಕುಡಿದೆವು. "ಭೈಯ್ಯಾ, ಛೆ ಲಸ್ಸಿ ದೇನಾ ಝರಾ" ನನ್ನ ಮಾತಿಗೆ ತಲೆದೂಗಿದ ಅಂಗಡಿಯವನು ಫ್ರಿಡ್ಜ್ ನಲ್ಲಿದ್ದ ಗಟ್ಟಿ ಮೊಸರು ತೆಗದು ,ಕಡೆದು, ಮಣ್ಣಿನ ಲೋಟೆಯಲ್ಲಿ ಹಾಕಿ ಕೊಟ್ಟನು. ಬಿಸಲಿನಲ್ಲಿ ಸುತ್ತಾಡಿ ದಣಿದಿದ್ದ ನಮ್ಮ ದೇಹ ತಂಪಾಯಿತು. ಮನಸ್ಸು ಉತ್ಸಾಹ ದ ಚಿಲುಮೆಯಾಯಿತು.
ಮುಂದುವರೆಯುತ್ತದೆ...


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ