ದೆಹಲಿ ಪ್ರವಾಸ,ಪ್ರಯಾಸ- 2

  ಬೆಳಿಗ್ಗೆ ಉಪ್ಪಿಟ್ಟು ತಿಂದ ನಾವು ಮೊದಲು ಪ್ರಯಾಣ ಬೆಳೆಸಿದ್ದು ಕುತುಬ್ ಮಿನಾರ್ ಕಡೆಗೆ. ಒಂದೆಡೆ  ವಾಹನ ದಟ್ಟಣೆ,ಇನ್ನೊಂದು ಕಡೆ ಸಮಯದ ಅಭಾವದಿಂದ ಸಾಧ್ಯವಾದಷ್ಟು ಬೇಗ ವೀಕ್ಷಿಸಲು ಆಯೋಜಕರು ಹೇಳಿದ್ದರು. ಹಾಗಾಗಿ ನಾವೂ ಗಡಿಬಿಡಿಯಿಂದ ಕುತುಬ್ ಮಿನಾರ್,ಅದರ ಪಕ್ಕವೇ ಇದ್ದ ಮಹಮದ್ ಖಿಲ್ಜಿ ಮುಂತಾದ  ದೊರೆ ಗಳ  ಮದರಸಗಳನ್ನು ನೋಡಿದೆವು. ಬಹುತೇಕ ಕಟ್ಟಡಗಳು ಶಿಥಿಲಾವಸ್ಥೆಯನ್ನು ತಲುಪಿವೆ.   ನಿರ್ಗಮನದ ದಾರಿಯಲ್ಲಿ ಅಳಿಲೊಂದು ಕುಣಿಯುತ್ತಾ ಬಂದು ನಮ್ಮನ್ನು ಸ್ವಾಗತಿಸಿತು. ಅದಕ್ಕೊಂದು ಬಿಸ್ಕತ್ ತುಣುಕು ಕೊಟ್ಟು ಬಸ್ ನಿಂತ ಕಡೆಗೆ ಹೊರಟೆವು.
                       
ಮುಂದಿನ ವೀಕ್ಷಣೆ  ಲೋಟಸ್ ಟೆಂಪಲ್. ಸುಂದರವಾದ ಉದ್ಯಾನದ ಮಧ್ಯೆ ಕೊಳಗಳಿಂದ ಆವೃತವಾದ ಅರೆಬಿರಿದ ತಾವರೆ. ತಾವರೆಯ ಒಳಭಾಗದಲ್ಲಿ ಚರ್ಚಿನಂತೆ ಕಾಣುವ ದೇವಾಲಯ. ವಿನ್ಯಾಸ ಮಾಡಿದವರ ಬುದ್ಧಿವಂತಿಕೆಗೆ ಒಂದು ಸಲಾಮ್ .
 ಬಳಿಕ ನಮ್ಮ ಸವಾರಿ ಕೆಂಪುಕೋಟೆಯತ್ತ ಹೊರಟಿತು. ಅದಾಗಲೇ ಊಟದ ಹೊತ್ತಾದ್ದರಿಂದ ವೊದಲು ಹೊಟ್ಟೆ ಪೂಜೆ ಮತ್ತೆಲ್ಲಾ ಮತ್ತೆ ಅಂದುಕೊಂಡು ರಸ್ತೆ ಬದಿಯ ಗಾಡಿಯವನಿಂದ ಆಲೂ ಪರೋಟ, ಗೋಭಿ ಸಬ್ಜೀ ಕೊಂಡು ತಿಂದೆವು. ಟಿಕೆಟ್ ಕೊಳ್ಳುವಲ್ಲಿ ಮಾರುದ್ದ ಸಾಲು. ಒಳಗೆ ಹೋದರೆ ನಂತರ ಶಾಪಿಂಗ್ ತಡವಾಗಬಹುದು ಎಂದು ಆಯೋಜರು ಹೇಳಿದಾಗ    ವಿಧಿಯಿಲ್ಲದೆ ಅಲ್ಲಿಂದ ವಾಪಾಸು ಬರಬೇಕಾಗಿ ಬಂತು. ನಂತರ ಇಂಡಿಯಾ ಗೇಟ್ ನೋಡಿ, ಅಲ್ಲೇ ಮಾರುತ್ತಿದ್ದ ಗೋಲ್ ಗಪ್ಪ ತಿಂದು ಎದುರಲ್ಲೇ ಇದ್ದ ಮಕ್ಕಳ ಪಾರ್ಕ್ ನೋಡಿದೆವು. ನಮ್ಮನ್ನು ಹೊತ್ತಿದ್ದ ಬಸ್ ಸರೋಜಿನಿ ಮಾರ್ಕೆಟ್ ದಾರಿ ಹಿಡಿಯಿತು. ಮಾರ್ಕೆಟ್ ತುಂಬಾ ಸುತ್ತಿ ಕೆಲವು ವಸ್ತುಗಳನ್ನು ಕೊಂಡು ಮಠಕ್ಕೆ ತೆರಳಿದಾಗ ರಾತ್ರಿ ಹತ್ತೂವರೆ. ಮರುದಿನ ಮಥುರಾಕ್ಕೆ  ತೆರಳುವ ಸಲುವಾಗಿ ಬೇಗನೆ ಏಳಬೇಕಿದ್ದುದರಿಂದ  ದೀಪವಾರಿಸಿ ಮಲಗಿಕೊಂಡೆವು.
                                               ಮುಂದುವರೆಯುತ್ತದೆ...  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಪತ್ಬಾಂಧವ

ಜಾನಕಿ ಮತ್ತು ಅವಳ ನಾಯಿ

ಅಂತೂ ನಾನೂ ಒಂದು ಕವನ ಬರೆದೆ