ಪೋಸ್ಟ್‌ಗಳು

ಚಿಂತನ-ಮಂಥನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜಾನಕಿ ಮತ್ತು ಅವಳ ನಾಯಿ

ಬೆಳಗ್ಗಿನ ಉಪಹಾರ ಮುಗಿಸಿ ಎಂದಿನಂತೆ ಹೊರಗೆ ಬಂದು ನೋಡುತ್ತೇನೆ   ಜಾನಕಿಯ ನಾಯಿ ನೆರೆ ಮನೆಗೆ ಬಂದಿದೆ. “ಇದು ಹೇಗೆ ಸಾಧ್ಯ? ಜಾನಕಿ ಇಲ್ಲವಲ್ಲ, ಮತ್ತೆ ಅವಳ ನಾಯಿ ಹೇಗೆ ಬಂತು?” ಸೂಕ್ಷ್ಮವಾಗಿ ಗಮನಿಸಿದಾಗ ಜಾನಕಿ ನಿಂತಿರುವುದು ಕಂಡಿತು. ಇಲ್ಲಿದೆ ಜಾನಕಿ ನಾಯಿ ಬಂದಿರುವ ಗುಟ್ಟು. “ಅವಳು ಬರದೆ ತಿಂಗಳಾಯಿತಲ್ಲ, ಇವತ್ತು ಬಂದಳೇನು?” ಎಂದುಕೊಂಡೆ. ಜಾನಕಿ ನೆರೆಮನೆಗೆ ಬರುವ ಕೆಲಸದವಳು. ಅವಳೊಂದಿಗೆ ಬಂದು, ಅವಳೊಡನೇ ಇದ್ದು,ಸಂಜೆ ಯಥಾವತ್ ಅವಳೊಡನೇ ಹಿಂತಿರುಗುವುದು ಅವಳ ನಾಯಿಯ ನಿತ್ಯದ ದಿನಚರಿ. ಇಂತಿಪ್ಪ ಜಾನಕಿಯ ನಾಯಿಯೇನು ಪೊಮೊರಿಯನ್,ಲ್ಯಾಬ್ರಡಾರ್, ಜರ್ಮನ್ ಶೆಫ಼ರ್ಡ್ ಅಥವಾ ಇನ್ನಿತರ ಹೆಸರುವಾಸಿ ತಳಿಯದ್ದಲ್ಲ. ಪಕ್ಕಾ ಲೋಕಲ್ ಕಂತ್ರಿ ನಾಯಿ. ಮುದ್ದು ಮುದ್ದಾಗಿ ಇರುವುದೇ ಎಂದರೆ ಅದೂ ಇಲ್ಲ. ಆದರೆ ಸ್ವಾಮಿ ನಿಷ್ಠೆಯ ವಿಷಯದಲ್ಲಿ ಮಾತ್ರ ಯಾವ ತಳಿಯ ನಾಯಿಗೂ ಕಮ್ಮಿ ಇಲ್ಲ ಎನ್ನಬಹುದು. ತನ್ನ ಒಡತಿ ಕೆಲಸಕ್ಕೆಂದು  ಎಲ್ಲಿ ಹೋಗುತ್ತಾಳೋ ಆ ಮನೆಯೇ ಅದರ ತಾತ್ಕಾಲಿಕ ವಾಸಸ್ಥಾನ.   ಶಿಸ್ತಿನ ವಿಷಯದಲ್ಲಿ ಜಾನಕಿಯ ನಾಯಿ ತುಂಬಾ ಕಟ್ಟುನಿಟ್ಟು. ತನ್ನ ಒಡತಿಯನ್ನು ಬಿಟ್ಟು ಒಂದಿಂಚೂ ಅತ್ತಿತ್ತ ಸರಿಯುವುದಿಲ್ಲ. ಕಣ್ಣಂಚಿನಲ್ಲಿ ಸನ್ನೆ ಮಾಡಿ ಸ್ನೇಹಿತೆಯನ್ನು(ನಾಯಿ) ತನ್ನ ಬಳಿಗೆ ಕರೆಸಿಕೊಂಡು ಚೂರು ಹೊತ್ತು ಆಟ ಆಡಿ, ನಂತರ ನಿದ್ದೆ ಹೋಗುತ್ತದೆ.             ...

ಮತ್ತದೇ ರಾಗ, ಅದೇ ಭಾವುಕ ಕ್ಷಣಗಳು

ಬಹುಶಃ  ಆಗ ನಾನು ಒಂಭತ್ತನೆಯ ತರಗತಿಯಲ್ಲಿ ಇದ್ದಿರಬೇಕು. ವಾರ್ಷಿಕ ಪರೀಕ್ಷೆ ಯ ಸಮಯ.  ಟಿವಿಯಲ್ಲಿ "ಮಾರ್ನಿಂಗ್ ರಾಗ"  ಎನ್ನುವ ಸಿನಿಮಾ ಪ್ರಸಾರವಾಗುತ್ತಿತ್ತು. ಮರುದಿನವೇ ಹಿಂದಿ ಪರೀಕ್ಷೆ. ಭಾಷಾ ವಿಷ...

ಬಿಗ್ ಬಾಸ್ - ಸಮಾಜದ ಕೈಗನ್ನಡಿ

"ಏನಿದೆ ಬಿಗ್ ಬಾಸ್ ನಲ್ಲಿ ಅಂಥಾದ್ದು? ಒಂದಿಷ್ಟು ಸೆಲೆಬ್ರಿಟೀಸ್ ಇರ್ತಾರೆ. ಟಾಸ್ಕ್ ಕೊಡ್ತಾರೆ , ಅದನ್ನು ಇವ್ರು ಮಾಡಬೇಕು. ಮತ್ತೆ ಒಂದೋ ಎರಡೋ ಲವ್ ಸ್ಟೋರೀಸ್ ಶುರುವಾಗುತ್ತದೆ, ಎಲ್ಲಾ  ಮೊದಲೇ ಪ್ಲಾನ್ ಮಾಡಿರ್ತಾರೆ. ಗಂಡು, ಹೆಣ್ಣು ಕುಣೀತಾರೆ, ನಲೀತಾರೆ. ಆ  ಮಲಯಾಳಂ ಚಾನಲ್ ನೋಡಿ ಕಲೀಬೇಕು ಈ ಕನ್ನಡದವರೆಲ್ಲಾ, ಎಷ್ಟು ನ್ಯಾಚುರಲ್ ಆಗಿ ಇರ್ತಾರೆ "   ಕೇರಳದಲ್ಲಿರುವ ಸಂಬಂಧಿಯೋರ್ವರ ಮಾತು ಕೇಳಿ ಕನ್ನಡಿಗಳಾದ ನನಗೂ ಹಾಗೆ ಅನ್ನಿಸಿತ್ತು.  ಆದರೂ ನಂಗಿಷ್ಟವಾದ ಸೀರಿಯಲ್, ಸಿನೆಮಾದ ವ್ಯಕ್ತಿಗಳೇ ಇದ್ದುದರಿಂದ ಮನಸ್ಸು ತಡೆಯಲಿಲ್ಲ. ಜೊತೆಗೆ ಅವರ ವ್ಯಕ್ತಿತ್ವದ ಪರಿಚಯ, ಏನಿದೆಯೆಂದು ನೋಡಿಯೇ ಬಿಡುವ ಎಂದು ನೋಡಲಾರಂಭಿಸಿದೆವು ಮನೆ ಮಂದಿಯೆಲ್ಲ.  ಸುಂದರವಾದ ಮನೆ, ಮನೆಯೊಳಗೆ ಬೇರೆ ಬೇರೆ ವ್ಯಕ್ತಿತವುಳ್ಳ ಒಂದಷ್ಟು  ಸ್ಪರ್ಧಿಗಳು.  ಕೆಲವರು ನೇರ ಮಾತಿನವರು, ಇನ್ನೂ ಕೆಲವರು ಗುಂಪುಗಾರಿಕೆಯವರು, ತಮ್ಮ ಮಾತಿನಂತೆ ನಡೆಯದವರನ್ನು  ಬೆಣ್ಣೆಯಿಂದ ಕೂದಲನ್ನು ತೆಗೆದಂತೆ ನಾಜೂಕಾಗಿ ಅತ್ತ ಸರಿಸಿಬಿಡುತ್ತಿದ್ದರು. ಒಬ್ಬ  ಅತಿಯಾದ ಮುಂಗೋಪಿ, ಇನ್ನೊಬ್ಬ ವ್ಯಂಗ್ಯವಾಗಿ ಮಾತಾಡುವವನು, ಮತ್ತೊಬ್ಬ ಅಪಹಾಸ್ಯ ಮಾಡುವನು. ಒಬ್ಬಾಕೆ ತುಂಬಾ ಚೆನ್ನಾಗಿ ಅಡಿಗೆ ಮಾಡುತ್ತಾ , ಇತರರನ್ನು ನಯವಾಗಿ ತನ್ನ ಮಾತಿನಂತೆ ನಡೆಸಿಕೊಳ್ಳುವಳು, ಹಿಂದಿನ  ಕಾಲದ ಅತ್ತೆಯಂದಿರಂತೆ. ಕೆಸರ...

ಕಿಟಕಿ ಬದಿಯ ಸೀಟಿನ ಮ್ಯಾಜಿಕ್

ಇಮೇಜ್
                                       ಕಿಟಕಿ ಬದಿಯ ಸೀಟು ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕಿಟಕಿ  ಬದಿಯ ಸೀಟಿನ ಮೇಲೆ ಏನೋ  ಆಕರ್ಷಣೆ .  ಮಕ್ಕಳು ಈ ಸೀಟಿಗೆ ಜಗಳವಾಡಿದರೆ, ದೊಡ್ಡವರು "ನನಗೆ ಅಲ್ಲೇ ಬೇಕು ಅಂತೇನಿಲ್ಲಪ್ಪ, ಎಲ್ಲಾದ್ರೂ ಸರಿ" ಎಂದರೂ ಕಣ್ಣುಗಳು ಮಾತ್ರ ಅಲ್ಲೇ ನೆಟ್ಟಿರುತ್ತವೆ. ಇನ್ನು ವಾಕರಿಕೆ  ಮಾಡಿಕೊಳ್ಳುವವರಿಗೆ ಇದು ಹಕ್ಕಿನ ಸ್ಥಳ.  "ನಂಗೆ ಒಮಿಟ್ ಬಂದಂತೆ ಆಗುತ್ತಿದೆ" ಎಂದರೆ ಸಾಕು, "ಸದ್ಯ, ಮೈಗೆ ಮಾಡದಿದ್ದರೆ ಸಾಕು"  ಎಂದುಕೊಂಡು ಕೂಡಲೇ ಕೂತವರು ಜಾಗ ಬಿಟ್ಟು ಕೊಡುತ್ತಾರೆ.  ವೃದ್ಧರಿಗೆ ಗಮ್ಯ ತಲುಪುವವವರೆಗೆ  ನಿದ್ದೆ ಮಾಡುವ ತಾತ್ಕಾಲಿಕ ಜಾಗವಾದರೆ, ಪ್ರೇಮಿಗಳಿಗೆ ಮೊಬೈಲ್ ನಲ್ಲಿ ಪಿಸುಗುಟ್ಟುತ್ತಾ ಮಾತಾಡಲು ಪ್ರಶಸ್ಥವಾದ ಸ್ಥಳ.  ಮೊಬೈಲ್ ನಲ್ಲಿ ಮೆಲ್ಲಗೆ ಮಾತಾಡುವುದು ಒಂದು ವಿದ್ಯೆಯೇ.  ಬಸ್ಸುಗಳ ಹಾರನ್ ಮಧ್ಯೆ, ಅಷ್ಟು ಮೆಲ್ಲಗೆ ಮಾತನಾಡಿದರೆ ಹೇಗೆ ಕೇಳಿಸುತ್ತದೆ ಎಂದು ಆಶ್ಚರ್ಯವಾಗುತ್ತದೆ. ಒಮ್ಮೆ ಏಕಲವ್ಯನಂತೆ, ನಾನೂ ಈ ವಿದ್ಯೆಯನ್ನು ಕಲಿಯಲೇಬೇಕು ಎಂದು ನಿರ್ಧರಿಸಿ  ಅಮ್ಮನಿಗೆ ಫೋನ್ ಮಾಡಿದೆ. ಇಯರ್ ಫೋನ್ ಹಾಕಿ ಸಣ್ಣಗೆ ...

ಶ್ವಾನ ಹೇಳಿದ ಭವಿಷ್ಯ

ಇಮೇಜ್
  ಧರ್ಮಸ್ಥಳದಲ್ಲಿ  ಲಕ್ಷದೀಪೋತ್ಸವ.ಅಕ್ಕನ ಮಗಳು ತುಂಬಾ ಖುಷಿಯಲ್ಲಿದ್ದಳು. ಅಲ್ಲಿಗೆ ಹೋದ ಮೇಲೆ ಏನೇನು ಮಾಡಬೇಕು, ತಿನ್ನಬೇಕು ಎಂಬ ಪಟ್ಟಿಯನ್ನು ದೊಡ್ಡ ಸ್ವರದಲ್ಲಿ ಹೇಳುತ್ತ್ತಿದ್ದಳು. "ಮೆಲ್ಲಗೆ ಹೇಳು" ಎಂದರೂ, ಲೌಡ್ ಸ್ಪೀಕರ್ ಸಣ್ಣದಾಗುವುದಿಲ್ಲ  ಎಂಬುದು ನನಗೆ ತಿಳಿಯದ ವಿಷಯವೇನಲ್ಲ. ಹಿಂದಿನ ದಿನವೇ ಜ್ವರ ಬಂದ ಕಾರಣ ಐಸ್ ಕ್ರೀಮ್ ತಿನ್ನಬೇಡ ವೆಂದು ಪದೇ ಪದೇ ನೆನಪಿಸುತ್ತಿದ್ದೆ. ಎಂದಿನಂತೆ "ಹೇಳಿದ್ದನ್ನೇ ಹೇಳಬೇಡ" ಎನ್ನಲಿಲ್ಲ. "ಓ...ಕೆ.. ಚಿಕ್ಕಮ್ಮ" ನಾಟಕೀಯವಾಗಿ ನುಡಿದಳು. ಹೋಗಿದ್ದೂ ಆಯಿತು. ಹಿಂತಿರುಗಿ ಬಂದದ್ದೂ ಆಯಿತು. ಏನೆಲ್ಲಾ ಮಾಡಿದೆ, ನೋಡಿದೆ, ತಂದೆ, ತಿಂದೆ ಇವುಗಳ ಸವಿಸ್ತಾರ ವರದಿಯೂ ಆಯಿತು.  ನನಗೆ ಗೋಭಿ ಮಂಚೂರಿ ಕಟ್ಟಿಸಿಕೊಂಡು ಬಂದಿದ್ದಳು. ತಂದ  ಬಿಲ್ಲು,ಬಾಣದ ಆಟಿಕೆಯೊಂದಿಗೆ ಆಡುತ್ತಿದ್ದವಳು ಪಕ್ಕನೆ "ಚಿಕ್ಕಮ್ಮ ಈ ಸರ್ತಿ  ನಾಯಿಯೊಂದು ಭವಿಷ್ಯ ಹೇಳುತ್ತಿತ್ತು.  ನಾವು ಕೇಳಲು  ಹೋಗಿದ್ದೆವು" ಎಂದಳು. "ಏನೆಲ್ಲಾ ಹೇಳಿತು?" ಎಂದೆ.  " ಫಸ್ಟ್ ಕ್ವೆಶ್ಚನ್ ಏನಂದ್ರೆ ಯಾರು ಸ್ಕೂಲಲ್ಲಿ ಫುಲ್ ಮಾರ್ಕ್ಸ್ ತೆಗೀತಾರೆ, ಹೋಮ್ ವರ್ಕ್  ಮಾಡ್ತಾರೆ" ಅಂತ ಅದರ ಓನರ್ ಕೇಳಿದ. ನಾಯಿ ನನ್ನತ್ರ ಬಂದು ನಿಂತಿತು" "ಮತ್ತೆ?" ಎಂದೆ. "ಮತ್ತೆ ಕೇಳಿದ, ಯಾರು ಗಂಡನ ಹತ್ತಿರ ತುಂಬಾ ಖರ್ಚು ಮಾಡಿಸ್ತಾರೆ ಅಂತ , ಅಮ್...

ಮರಳಿ ಬಾ ಬಾಲ್ಯವೇ..

ಇಮೇಜ್
ಹೀಗೆ ಯಾರದೋ ಸಾಮಾಜಿಕ ಜಾಲತಾಣದ ಪುಟಗಳನ್ನು ಕ್ಲಿಕ್ಕಿಸುತ್ತಿರುವಾಗ ಸುಭದ್ರಾ ಕುಮಾರಿ ಚೌಹಾಣರ ಕವಿತೆಯ ಸಾಲು  ಓದಲು ಸಿಕ್ಕಿತು.         ಬಾರ್ ಬಾರ್ ಆತೀ ಹೇ ಮುಜ್ ಕೋ ಮಧುರ್ ಯಾದ್ ಬಚ್ ಪನ್ ತೇರೀ,          ಗಯಾ ಲೇ ಗಯಾ ತೂ  ಜೀವನ್ ಕೀ ಸಬ್ ಸೇ ಮಸ್ತ್ ಖುಷೀ ಮೇರೀ               ಹೈಸ್ಕೂಲಿನ ದಿನಗಳಲ್ಲಿ ಬಾಯಿಪಾಠ ಮಾಡಿಕೊಳ್ಳುತ್ತಿದ್ದ ಕವಿತೆಯಿದು. ಆಗ ಇದರ ಹಿಂದಿನ ಭಾವದ ಅರಿವಿರಲಿಲ್ಲ. ಏನು ಅರ್ಥಪೂರ್ಣವಾದ ಮಾತುಗಳು ಅವು! ಬಾಲ್ಯವೆಂಬುದು ಒಂದು ಆಹ್ಲಾದಕಾರವಾದ ನೆನಪು. ಅಲ್ಲಿ ದುಗುಡಗಳಿಗೆ ಆಸ್ಪದವಿಲ್ಲ, ನಿನ್ನೆ ನಾಳೆಗಳ ಬಗೆಗಿನ ವ್ಯಥೆಯಿಲ್ಲ.  ನಾನು ಹೋದದ್ದು ಸರಕಾರೀ ಕನ್ನಡ ಮಾಧ್ಯಮ ಶಾಲೆಗೆ. ಅವು ಪ್ರಾಥಮಿಕ ಶಾಲೆಯ ದಿನಗಳು. ಆಗೆಲ್ಲ ಈಗಿನಂತೆ ಕುರ್ಚಿ ಮೇಜುಗಳ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ತಗ್ಗಿನ ಬೆಂಚುಗಳು. ಕುಳಿತುಕೊಳ್ಳುವುದು,ಬರೆಯುವುದು ಏನಿದ್ದರೂ ಅದರ ಮೇಲೆಯೇ. ಶಾಲೆಗೆ ಎಂದು ಹೊರಟು ನಿಂತರೆ ನಮ್ಮ ಮನೆಯ ನಾಯಿ ಟಾಮಿ ಕೂಡ ಹೊರಟು ನಿಲ್ಲುತ್ತಿತ್ತು. ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾದ ನನ್ನನ್ನು ಕಂಡರೆ ಅದಕ್ಕೆ ವಿಶೇಷ ಕಾಳಜಿ . "ಏ ನೋಡಾ, ನಿ...