ಪೋಸ್ಟ್‌ಗಳು

ಕಥಾ ಗುಚ್ಛ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೀರ ಮೇಲಣ ಗುಳ್ಳೆ

ಇಮೇಜ್
"ನೀರಿನಲ್ಲಿ ಮುಳುಗಿ ನಟನೊಬ್ಬನ ದುರ್ಮರಣ" ಎಂಬ ಶೀರ್ಷಿಕೆಯೊಂದಿಗ ವಾಹಿನಿಯಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. "ಈಜು ಬರಲ್ಲ, ಆದ್ರೂ ಶಾಟ್ ಮಾಡೋದಿಕ್ಕೆ ರೆಡಿ, ಮುಂದಿದ್ದನ್ನ ದೇವ್ರು ನೋಡ್ಕೋತಾನೆ ಎಂಬ ನಂಬಿಕೆ ಇದೆ" ಸಾಯುವ ಸ್ವಲ್ಪ ಹೊತ್ತಿನ ಮುಂಚೆ ನಡೆದ ಸಂದರ್ಶನದಲ್ಲಿ ನಟನಾಡಿದ ಕೊನೆಯ ಮಾತುಗಳಾಗಿದ್ದವು ಅವುಗಳು.  "ಈಜು ಬರದೆ ಶಾಟ್ ಮಾಡೋದಿಕ್ಕೆ ಒಪ್ಕೋಬಾರದಿತ್ತು" ಅಲ್ಲೇ ನೆರೆದಿದ್ದ ಜನರು ಮಾತನಾಡಿಕೊಂಡರು. ಸುದ್ದಿ ನೋಡಿ ಟಿವಿ ಆರಿಸಿದ ಚೇತನ್ ಆಫೀಸಿಗೆ ಹೊರಟ. ದಾರಿಯುದ್ದಕ್ಕೂ ಅದೇ ಘಟನೆ ಅವನ ಕಣ್ಮುಂದೆ ಸುಳಿದಾಡುತ್ತಿತ್ತು. ಎಂದಿನಂತೆ ಯಾಂತ್ರಿಕವಾಗಿ ಕೆಲಸ ಮುಗಿಸಿ ಬಂದವನು ಹಾಸಿಗೆಯಲ್ಲುರುಳಿದನು. ಪತ್ನಿ, ಮಕ್ಕಳಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ದೀಪಾವಳಿ ಹಬ್ಬಕ್ಕೆಂದು ಅವರೆಲ್ಲರೂ ಸ್ವಲ್ಪ ದಿನ ಮುಂಚಿತವಾಗಿಯೇ ಊರಿಗೆ ತೆರಳಿದ್ದರು.  "ಏನ್ರೀ ಹಬ್ಬದ ದಿನಗಳಲ್ಲಿಯೂ ನಿಮ್ಮ ಕೆಲಸ ಇದ್ದೇ ಇರ್ತದೆ. ಎಲ್ಲರೂ ಹಬ್ಬಾಂತ ಊರಿಗೆ ಹೊರಟಿದ್ದಾರೆ. ನೀವು ಮಾತ್ರ ಕೆಲಸ, ಕೆಲಸ ಅಂತ ಒದ್ದಾಡ್ತೀರ. ಅಷ್ಟಕ್ಕೂ, ನಿಮ್ಮದೇ ಆಫೀಸ್, ನೀವೇ ಬಾಸ್. ಹಬ್ಬದ ದಿನಗಳಲ್ಲಾದರೂ ಕೆಲಸ ಪಕ್ಕಕ್ಕಿಟ್ಟು ಮನೆಯವರ ಜೊತೆ ಇರಬಾರದಾ? ನೀವೂ ಬಂದಿದ್ದರೆ ಅತ್ತೆ,ಮಾವ,ಅಪ್ಪ, ಅಮ್ಮ ಎಲ್ಲ ಖುಷಿ ಪಡುತ್ತಿದ್ದರು" ಪತ್ನಿ ಹೋಗುವ ಹಿಂದಿನ ದಿನ ಅಸಮಾಧಾನದಿಂದ ನುಡಿದಿದ್ದಳು. ಚೇತನ್ ತುಟಿಪಿಟಿಕ್ಕ...

ಅರಿವು

                                                            ಕಥೆ - ೧ ಮೊಬೈಲ್ ನಲ್ಲಿ ತನ್ನ ಗೆಳತಿಗೆ ಸಂದೇಶ ಕಳುಹಿಸುತ್ತಿದ್ದಳು ಮಧುರಾ. ಮನೆಗೆ ಅವಳ ಅಜ್ಜಿಯ ತಂಗಿಯಂದಿರು ಬಂದಿದ್ದರು. ನೆಪ ಮಾತ್ರಕ್ಕೆ  ಅವರೊಂದಿಗೆ ಕುಳಿತಿದ್ದ ಅವಳ ಗಮನವೆಲ್ಲಾ ಮೊಬೈಲ್ ಮೇಲೆ ಕೇಂದ್ರೀಕೃತವಾಗಿತ್ತು.  ಗೆಳತಿಗೆ ವಿಷಯ ತಿಳಿಸಿದಳು. "ಓ! ಅಜ್ಜಿಯಂದಿರ ಹತ್ತಿರ ಚಾಟಿಂಗಾ, ಹಾ?" ಪ್ರಶ್ನಿಸಿದಳು ಗೆಳತಿ. "ಛೇ! ಇಲ್ಲಪ್ಪಾ, ಈ ವಯಸ್ಸಾದವರಲ್ಲಿ ನನಗೇನಿದೆ ಮಾತಾಡುವಂಥದ್ದು? ಹೇಗೆ ತಪ್ಪಿಸಿಕೊಳ್ಳುವುದು ಅಂತ ಯೋಚಿಸುತ್ತಿದ್ದೇನೆ"  ಅಸಡ್ಡೆಯಿಂದ ಉತ್ತರಿಸಿದ ಮಧುರಾ "ನಾನು ಓದಲಿಕ್ಕೆ ಹೋಗುತ್ತೇನೆ ಮಮ್ಮಿ" ಎಂದು ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಮಧುರಾಳಿಗೆ ಯೌವ್ವನ ಶಾಶ್ವತವಲ್ಲ, ತಾನೂ ಮುಂದೊಂದು ದಿನ ಮುದುಕಿಯಾಗುತ್ತೇನೆ ಎಂಬ ಸತ್ಯದ ಅರಿವು ಆಗಲೇ ಇಲ್ಲ.                                   ಕಥೆ - ೨ "ಯಾರಿದು? ಯಾವಾಗ ನೋಡಿದ್ರೂ ಚಾಟ್ ಮಾಡ್ತಿರ್ತೀಯ? ನಿನ್ನ ಎಲ್ಲ ಕಾಲೇಜ್  ಫೋಟೋ ದ...

ದೂರದ ಬೆಟ್ಟ

ಇಮೇಜ್
"ರ್ರೀ.. ಊಟ ರೆಡಿ, ಊಟ ಮಾಡಿ ಮತ್ತೆ ಟಿವಿ ನೋಡಬಾರದಾ ? ಎಷ್ಟು ಸಲ ಕರೆಯುವುದು ನಿಮ್ಮನ್ನು?" ಹೆಂಡತಿಯ ಕರೆಗೆ ಕಿಡಿ ಕಿಡಿಯಾದ ಸಂದೀಪ "ಆಯ್ತು ಮಾರ್ರಾಯ್ತಿ ಬರ್ತೇನೆ. ನನ್ನಷ್ಟಕ್ಕೆ ಇರಲಿಕ್ಕೂ ಬಿಡುವುದಿಲ್ಲಲ್ಲ ನೀನು " ಎಂದು ಗೊಣಗುತ್ತಾ  ಬಂದು ಸರಸರನೆ ಊಟ ಮುಗಿಸಿ ಮತ್ತೆ ಟಿವಿ ನೋಡತೊಡಗಿದ. "ಏನಾಗಿದೆ ಇವರಿಗೆ? ಸರಿಯಾಗಿ ಮುಖ ಕೊಟ್ಟು ಮಾತೂ ಆಡುವುದಿಲ್ಲ. ಆಫೀಸಿಗೆ ಹೋಗಿ ಬರುವುದು, ಟಿವಿ ಮುಂದೆ ಕೂತ್ಕೊಳ್ಳೋದು ಎರಡೇ ಕೆಲಸ. ಮನೆಯಲ್ಲಿ ಹೆಂಡತಿ ಅಂತ ಒಂದು ಪ್ರಾಣಿ ಇದೆ ಅಂತಲೂ ಗೊತ್ತಿಲ್ಲ ಇವರಿಗೆ" ಮನಸ್ಸಿನಲ್ಲಿಯೇ ಗೊಣಗಿಕೊಂಡಳು ವಸುಧಾ.                           ವಸುಧಾ ಡಬಲ್ ಗ್ರಾಜುವೇಟ್.  ಮದುವೆ  ಆದ ನಂತರ ಕೆಲಸಕ್ಕೆ ಹೋಗದೆ ಗಂಡ, ಸಂಸಾರ ಅಂತ ಮನೆಯಲ್ಲಿ ಉಳಿದು ಬಿಟ್ಟಳು.   ಬಿಡುವಿನ ವೇಳೆಯಲ್ಲಿ ಸಂಗೀತ, ಹೊಲಿಗೆ ಅಂತ ಹವ್ಯಾಸಗಳನ್ನು ಬೆಳೆಸಿಕೊಂಡಳು. ಸಂದೀಪನೂ  ಇದಕ್ಕೆ  ತಕರಾರು ತೆಗೆದಿರಲಿಲ್ಲ. .  ಒಂದು ದಿನ ತನ್ನ ಸಹೋದ್ಯೋಗಿ ಮನೆಗೆ ಊಟಕ್ಕೆ ಹೋದ ಸಂದೀಪ ಆತನ ಸಹೋದ್ಯೋಗಿಯ ಹೆಂಡತಿ ಸುರಭಿಯನ್ನು ಭೇಟಿ ಮಾಡಿದ. ಸುರಭಿ ಕೆಲಸಕ್ಕೆ ಹೋಗುವ ಹೆಣ್ಣುಮಗಳು. ಸಹಜವಾಗಿಯೇ ಗಂಡಸರಿಗೆ ಸರಿಸಮನಾಗಿ ನಿಂತು ಎಲ್ಲ ಕೆಲಸಗಳನ್ನು ಜಾಣ್ಮೆಯಿಂದ ನಿಭಾಯಿಸುತ್ತಿ...

ಎಲ್ಲಿಗೀ ಪಯಣ

ಬಸ್ಸು ಶರವೇಗದಿಂದ ಬೆಂಗಳೂರಿಂದ ಮಂಗಳೂರಿಗೆ ಧಾವಿಸುತ್ತಿತ್ತು. ಸಹ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರೂ  ಮಾತ್ರ ನಿದ್ದೆ ಹತ್ತಿರಲಿಲ್ಲ.ಜಯಂತ, ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದವನು ರಜೆಯ ನಿಂತ್ತ  ಹೊರಟಿದ್ದ. ಆದರೆ ಮನೆಯಲ್ಲಿ ಮಾತ್ರ ಈ ಸಲ ತನಗೆ ಬರಲಾಗದು ಎಂದು ತಿಳಿಸಿದ್ದ. ಮನೆಯವರಿಗೆ ಸರ್ಪ್ರೈಜ್ ಕೊಡುವುದು ಅವನ  ಪ್ಲಾನ್ ಆಗಿತ್ತು. ಅವನ ಮನದಲ್ಲಿ ಸಂತಸದ ಅಲೆಗಳು ಏಳುತ್ತಿತ್ತು. ಹಬ್ಬವಾದ್ದರಿಂದ ಮನೆಯವರಿಗೆಲ್ಲ ಬಟ್ಟೆಗಳನ್ನು ಕೊಂಡುಕೊಂಡಿದ್ದ. "ತಂಗಿ ಮುಂದೆ ಅವಳಿಷ್ಟದ ಅನಾರ್ಕಲಿ ಡ್ರೆಸ್  ಹಿಡಿದರೆ ಅವಳ ಮುಖ ಹೇಗೆ ಅರಳಬಹುದು, ಅಪ್ಪ,ಅಮ್ಮ ಎಷ್ಟು ಖುಷಿ ಪಡಬಹುದು, ಅಮ್ಮನ ಕೈಯ ನೀರುದೋಸೆ ತಿಂದು ಎಷ್ಟು ದಿನ ಆಯಿತು"  ಯೋಚಿಸುತ್ತಿದ್ದವನಿಗೆ ಸಣ್ಣಗೆ ನಿದ್ದೆ ಆವರಿಸಿತು. ದಢಾರ್ ಅಂತ ಅಂತ ಸದ್ದು. ಏನಾಯ್ತು ಎಂದು ತಿಳಿಯುವ ಮೊದಲೇ ಜಯಂತನಿಗೆ ಪ್ರಜ್ಞೆ ತಪ್ಪುತ್ತಿರುವ ಅನುಭವ. ಪ್ರಯಾಣಿಕರ ಅಳು ಚೀರಾಟ ಕೇಳುತ್ತಿತ್ತು.  ಮನೆಯವರಿಗೆ ಸಪ್ರೈಜ್ ಕೊಡಲು ಹೊರಟ  ಜಯಂತ ಮತ್ತೆಂದೂ ಬಾರದ  ಲೋಕಕ್ಕೆ  ಪಯಣಿಸಿದ್ದ.  

ಒಂದು ಕನಸಿನ ಕಥೆ

ಇಮೇಜ್
ಬಸ್ಸು ಎಂದಿನಂತೆ ಜನರಿಂದ ತುಂಬಿ ತುಳುಕುತ್ತಿತ್ತು. ಅಂತೂ ಹೇಗೋ ಮಾಡಿ ಸೀಟನ್ನು ಹಿಡಿದಳು ತೇಜಸ್ವಿನಿ. ನಿತ್ಯವೂ ಇದೇ ಗೋಳು. ಆದರೆ ಏನು ಮಾಡುವುದು,ಕಾಲೇಜಿಗೆ ಹೋಗಲು ಇದೇ ಬಸ್ ಆಗಬೇಕು.  "ಇನ್ನೊಂದು ವರ್ಷ ಅಷ್ಟೆ, ಆಮೇಲೆ ಈ ಬಸ್ ಓಡಾಟ ಮುಗೀತದೆ" ಮನದಲ್ಲಿ ಅಂದುಕೊಂಡಳು. ಮುಂದಿನ ಸ್ಟಾಪ್ ನಲ್ಲಿ ಮಗು ವನ್ನೆತ್ತಿಕೊಂಡ ಮಹಿಳೆ ಒಬ್ಬಳು ಬಸ್ ಹತ್ತಿದಳು.  ಸೀಟ್ನಲ್ಲಿ ಕೂತ ತೇಜಸ್ವಿನಿ ಜಾಗ ಬಿಟ್ಟು ಕೊಡಲೆತ್ನಿಸಿದಾಗ ಕುಳಿತು ಕೊಳ್ಳುವಂತೆ ಸನ್ನೆ ಮಾಡಿದ ಮಹಿಳೆ ತನ್ನ ಕೈಯಲ್ಲಿ ದ್ದ ಮಗುವನ್ನು ಅವಳಿಗೆ ಕೊಟ್ಟಳು. ಏನಾಶ್ಚರ್ಯ! ಕಿಂಚಿತ್ತೂ ಕೊಸರಾಡದೆ ತೇಜಸ್ವಿನಿ ತೊಡೆಯಲ್ಲಿ ಕುಳಿತು ಕೊಂಡಿತು. ಅವಳ ಕೂದಲಿನಲ್ಲಿ ಆಟವಾಡತೊಡಗಿತು. "ಎಲ್ಲಿ ಇಳಿಯುವುದು ನೀವು?" ಆ ಮಹಿಳೆಯನ್ನು ವಿಚಾರಿಸಿದಳು. "ಕಾಲೇಜು ಸ್ಟಾಪಿನ ಹಿಂದಿನ ಸ್ಟಾಪ್". ಮತ್ತೇನು ಮಾತನಾಡಲು ತೋಚದೆ ಕಿಟಕಿಯತ್ತ ದೃಷ್ಟಿ ಹಾಯಿಸಿದಳು. ಕಾ ಲೇಜು ತಲುಪಲು ಇನ್ನು ಇಪ್ಪತ್ತು ನಿಮಿಷಗಳು  ಉಳಿದಿದೆ ಎನ್ನುವಷ್ಟರಲ್ಲಿ ಒಂದು ಸ್ಟಾಪ್ ಬಂದಿತು. ತೇಜಸ್ವಿನಿ ನೋಡುತ್ತಿರುವಂತೆ ಆ ಮಹಿಳೆ ಜನ ಜಂಗುಳಿಯ ಮಧ್ಯೆ ತೂರಿ ಮುಂಬಾಗಿಲಿನಿಂದ ಇಳಿದುಬಿಟ್ಟಳು. "ಓಯ್..ನಿಮ್ಮ ಮಗು"  ಹೇಳಲೆತ್ನಿಸಿದರೂ ಗಂಟಲಿನಿಂದ ಸ್ವರ ಬರುತ್ತಿಲ್ಲ. "ಅಯ್ಯೋ, ಇಳಿದು ಬಿಟ್ಟರಲ್ಲ ಏನು ಮಾಡಲಿ, ಬ್ಯಾಗ್ ಮರೆಯುವುದು ಕೇಳಿದ್ದೇನೆ. ಮಗುವನ್ನು ಮರೆತು ಹ...