ದೆಹಲಿ ಪ್ರವಾಸ, ಪ್ರಯಾಸ-4
ಬಹುಶಃ ನಾವು ಮಥುರಾದ 2% ನಷ್ಟೂ ನೋಡಿರಲಿಕ್ಕಿಲ್ಲ. ಏಕೆಂದರೆ ಮಥುರಾ ದಲ್ಲಿ ಬಾ ಕೆ ಬಿಹಾರಿ, ದ್ವಾರಕಾಧೀಶ ಮಂದಿರ, ಕಂಸ ಕಿಲಾ, ಪ್ರೇಮ ಮಂದಿರ ದಂತಹ ಇನ್ನೂ ಅನೇಕ ಪ್ರವಾಸಿ ತಾಣಗಳು ಇವೆ. ಮಥುರಾದ ನಂತರ ಆ ದಿನದ ನಮ್ಮ ಕೊನೆಯ ಭೇಟಿಯ ಪ್ರವಾಸಿ ಸ್ಥಳ ತಾಜ್ ಮಹಲ್.
ತಾಜ್ ಮಹಲ್ ಮಥುರಾ ದಿಂದ.ಸುಮಾರು 60 ಕಿ.ಮೀ ದೂರದಲ್ಲಿದೆ. ಮಧ್ಯಾಹ್ನದ ಹೊತ್ತು. ಕೆಲವರು ಬೆಳಗಿನ ಮಿಕ್ಕಿದ್ದ ಚಿತ್ರಾನ್ನವನ್ನು ತಿಂದರು. ಉಳಿದವರು ಢಾಬಾದಲ್ಲಿ ಉಪಹಾರ ಸೇವಿಸಿದರು.ಪ್ರಯಾಣದ ಮಧ್ಯ ಹೊತ್ತು ಕಳೆಯಲೆಂದು, ಪ್ರತಿಭಾ ಪ್ರದರ್ಶನ ಮಾಡಿದೆವು. ಈ ಮಧ್ಯೆ ನಾನೂ, ನನ್ನ ಮ್ಮನ ಹಾಡಿನ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ನಾನು,ನನ್ನ ಅಕ್ಕನ ಮಗಳು ತನ್ವಿಯ ಜುಗಲ್ ಬಂದಿ ನಡೆಯಿತು. ನಂತರದಲ್ಲಿ ತನ್ವಿ ಒಂದರ ಮೇಲೊಂದರಂತೆ ಹಾಡು ಹಾಡಿ ಎಲ್ಲರನ್ನೂ ರಂಜಿಸಿದಳು. ರಂಗಿತರಂಗದ 'ಡೆನ್ನಾನ' ಹಾಡು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಹೀಗೆ ಒಬ್ಬರ ನಂತರ ಒಬ್ಬರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ಕೊನೆಗೂ ನಮ್ಮ ಬಸ್ ಆಗ್ರಾ ಪ್ರವೇಶ ಮಾಡಿತು. ಅದಾಗಲೇ ಸಂಜೆ 3:30 ಆಗಿದ್ದರಿಂದ ವಿಪರೀತ ವಾಹನ ದಟ್ಟಣೆ. ಬಸ್ ಅಲ್ಲಲ್ಲಿ ನಿಂತು ಸಾಗುತ್ತಿತ್ತು. ನೇತು ಹಾಕಿದ ನಾಮ ಫಲಕದಲ್ಲಿ ತಾಜ್ ಮಹಲ್ 1k.m ಎಂದು ಬರೆದಿತ್ತು.ಸದ್ಯ ತಲುಪಿದೆವಲ್ಲ ಅಂದುಕೊಂಡೆ. ಆದರೆ ಬಸ್ ಮುಂದೆ ಸಾಗುತ್ತಿತ್ತೆ ವಿನಹ 1km ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ತಿರುವಿನ ನಂತರ ಸ್ವಲ್ಪ ಮುಂದೆ ಸಾಗಿ ಬಸ್ ಪುನಃ ನಿಂತು ಬಿಟ್ಟಿತು. ಸಂಜೆ 4:30ರ ಸಮಯ. ಐದು ಗಂಟೆಗೆ ಟಿಕೆಟ್ ಕೊಡುವುದು ನಿಲ್ಲಿಸುತ್ತಾರೆ, ಮೊದಲು ತಾಜ್ ಮಹಲ್ ನೋಡಬಹುದಿತ್ತು ಎಂಬ ಮಾತು ಕೇಳಿ ಬಂತು. ಆದದ್ದಾಯಿತು ಇಷ್ಟು ದೂರ ಬಂದು ತಾಜ್ ಮಹಲ್ ನೋಡದೇ ಹೋಗುವುದೆ? ನಮ್ಮಲ್ಲೇ ಚರ್ಚಿಸಿ ನಡೆದು ಹೋಗುವ ತೀರ್ಮಾನ ಮಾಡಿದೆವು. ಇಬ್ಬರು ಟಿಕೆಟ್ ವ್ಯವಸ್ಥೆ ಗೆಂದು ತೆರಳಿದರೆ, ಉಳಿದವರು ಒಟ್ಟಾಗಿ ಮುಂದುವರೆದೆವು. ಎಷ್ಟು ನಡೆದರೂ 1km ಮುಗಿಯುತ್ತಲೇ ಇಲ್ಲ. ಸುಮಾರು 2km ನಡೆದ ನಂತರ ಪ್ರವೇಶ ದ್ವಾರ ಕಾಣತೊಡಗಿತು. ಜೊತೆಗೆ ನಮಗಿಂತ ಮೊದಲೇ ಬಂದ ಜನಸಾಗರ. ಸಾಲಿನಲ್ಲಿ ನಿಂತು ಎರಡನೇ ದ್ವಾರದ ಬಳಿಗೆ ಬರುವ ಹೊತ್ತಿಗೆ ಒಂದು ಸಾಲು ಹಲವು ಸಾಲುಗಳಾಗಿ, ನೂಕು ನುಗ್ಗಲಾಯಿತು. ಉಸಿರಾಡಲು ಜಾಗವಿಲ್ಲದಷ್ಟು ಜನ. ಮೈ ತುಂಬಾ ಬೆವರಿನ ಸ್ನಾನವಾಯಿತು. ಟಿಕೆಟ್ ತಪಾಸಣೆಯಾದ ಬಳಿಕ ಕೈ ಚೀಲದ ತಪಾಸಣೆ. ತಿನ್ನಲೆಂದು ನನ್ನ ಅಕ್ಕ ಊರಿನಿಂದ ತಂದಿದ್ದ ದಾಳಿಂಬೆ,ಸೇಬುಗಳೆಲ್ಲ ಮಹಿಳಾ ಪೇದೆಯ ಪಾಲಾದವು. ಎಲ್ಲರ ತಪಾಸಣೆ ಮುಗಿದ ಬಳಿಕ ಮುಖ್ಯ ದ್ವಾರವನ್ನು ಪ್ರವೇಶ ಮಾಡಿದೆವು. ಒಳಗೆ ಕಾಲಿಡುತ್ತಿದ್ದಂತೆ ಕಂಡ ತಾಜ್ ಗಾಳಿಯಲ್ಲಿ ತೇಲುತ್ತಿರುವಂತೆ ನನಗೆ ಅನಿಸಿತು. ಮತ್ತೂ ಹತ್ತಿರ ಹೋದಾಗ ನಾನು ನೋಡುತ್ತಿರುವ ದ್ರಶ್ಯ ಕನಸಿನಂತೆ, ಯಾರೋ ಕಲಾವಿದ ಹಾಳೆಯಲ್ಲಿ ಬಿಡಿಸಿದ ಚಿತ್ರದಂತೆ ಕಂಡಿತು. ಸುಂದರವಾದ ಉದ್ಯಾನವಿದ್ದರೂ ನನ್ನ ದ್ರಷ್ಟಿ ಅತ್ತ ಹರಿಯುತ್ತಿಲ್ಲ. ನನ್ನ ಗಮನವೆಲ್ಲ ತಾಜ್ ಮಹಲ್ ನತ್ತಲೇ ಇತ್ತು. ಈ ಅನುಭವ ನನಗೆ ಮಾತ್ರವೇ ಆಗಿತ್ತಾ, ಗೊತ್ತಿಲ್ಲ."ಇಲ್ಲ, ಇದು ಕನಸು. ಇದು ಒಂದು ಮಾಯೆ, ಭ್ರಮೆ" ಎಂದೇ ನನಗೆ ಅನಿಸಿತು.
ಮುಂದುವರೆಯುತ್ತದೆ....ತಾಜ್ ಮಹಲ್ ಮಥುರಾ ದಿಂದ.ಸುಮಾರು 60 ಕಿ.ಮೀ ದೂರದಲ್ಲಿದೆ. ಮಧ್ಯಾಹ್ನದ ಹೊತ್ತು. ಕೆಲವರು ಬೆಳಗಿನ ಮಿಕ್ಕಿದ್ದ ಚಿತ್ರಾನ್ನವನ್ನು ತಿಂದರು. ಉಳಿದವರು ಢಾಬಾದಲ್ಲಿ ಉಪಹಾರ ಸೇವಿಸಿದರು.ಪ್ರಯಾಣದ ಮಧ್ಯ ಹೊತ್ತು ಕಳೆಯಲೆಂದು, ಪ್ರತಿಭಾ ಪ್ರದರ್ಶನ ಮಾಡಿದೆವು. ಈ ಮಧ್ಯೆ ನಾನೂ, ನನ್ನ ಮ್ಮನ ಹಾಡಿನ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ನಂತರದಲ್ಲಿ ನಾನು,ನನ್ನ ಅಕ್ಕನ ಮಗಳು ತನ್ವಿಯ ಜುಗಲ್ ಬಂದಿ ನಡೆಯಿತು. ನಂತರದಲ್ಲಿ ತನ್ವಿ ಒಂದರ ಮೇಲೊಂದರಂತೆ ಹಾಡು ಹಾಡಿ ಎಲ್ಲರನ್ನೂ ರಂಜಿಸಿದಳು. ರಂಗಿತರಂಗದ 'ಡೆನ್ನಾನ' ಹಾಡು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಹೀಗೆ ಒಬ್ಬರ ನಂತರ ಒಬ್ಬರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು. ಕೊನೆಗೂ ನಮ್ಮ ಬಸ್ ಆಗ್ರಾ ಪ್ರವೇಶ ಮಾಡಿತು. ಅದಾಗಲೇ ಸಂಜೆ 3:30 ಆಗಿದ್ದರಿಂದ ವಿಪರೀತ ವಾಹನ ದಟ್ಟಣೆ. ಬಸ್ ಅಲ್ಲಲ್ಲಿ ನಿಂತು ಸಾಗುತ್ತಿತ್ತು. ನೇತು ಹಾಕಿದ ನಾಮ ಫಲಕದಲ್ಲಿ ತಾಜ್ ಮಹಲ್ 1k.m ಎಂದು ಬರೆದಿತ್ತು.ಸದ್ಯ ತಲುಪಿದೆವಲ್ಲ ಅಂದುಕೊಂಡೆ. ಆದರೆ ಬಸ್ ಮುಂದೆ ಸಾಗುತ್ತಿತ್ತೆ ವಿನಹ 1km ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ತಿರುವಿನ ನಂತರ ಸ್ವಲ್ಪ ಮುಂದೆ ಸಾಗಿ ಬಸ್ ಪುನಃ ನಿಂತು ಬಿಟ್ಟಿತು. ಸಂಜೆ 4:30ರ ಸಮಯ. ಐದು ಗಂಟೆಗೆ ಟಿಕೆಟ್ ಕೊಡುವುದು ನಿಲ್ಲಿಸುತ್ತಾರೆ, ಮೊದಲು ತಾಜ್ ಮಹಲ್ ನೋಡಬಹುದಿತ್ತು ಎಂಬ ಮಾತು ಕೇಳಿ ಬಂತು. ಆದದ್ದಾಯಿತು ಇಷ್ಟು ದೂರ ಬಂದು ತಾಜ್ ಮಹಲ್ ನೋಡದೇ ಹೋಗುವುದೆ? ನಮ್ಮಲ್ಲೇ ಚರ್ಚಿಸಿ ನಡೆದು ಹೋಗುವ ತೀರ್ಮಾನ ಮಾಡಿದೆವು. ಇಬ್ಬರು ಟಿಕೆಟ್ ವ್ಯವಸ್ಥೆ ಗೆಂದು ತೆರಳಿದರೆ, ಉಳಿದವರು ಒಟ್ಟಾಗಿ ಮುಂದುವರೆದೆವು. ಎಷ್ಟು ನಡೆದರೂ 1km ಮುಗಿಯುತ್ತಲೇ ಇಲ್ಲ. ಸುಮಾರು 2km ನಡೆದ ನಂತರ ಪ್ರವೇಶ ದ್ವಾರ ಕಾಣತೊಡಗಿತು. ಜೊತೆಗೆ ನಮಗಿಂತ ಮೊದಲೇ ಬಂದ ಜನಸಾಗರ. ಸಾಲಿನಲ್ಲಿ ನಿಂತು ಎರಡನೇ ದ್ವಾರದ ಬಳಿಗೆ ಬರುವ ಹೊತ್ತಿಗೆ ಒಂದು ಸಾಲು ಹಲವು ಸಾಲುಗಳಾಗಿ, ನೂಕು ನುಗ್ಗಲಾಯಿತು. ಉಸಿರಾಡಲು ಜಾಗವಿಲ್ಲದಷ್ಟು ಜನ. ಮೈ ತುಂಬಾ ಬೆವರಿನ ಸ್ನಾನವಾಯಿತು. ಟಿಕೆಟ್ ತಪಾಸಣೆಯಾದ ಬಳಿಕ ಕೈ ಚೀಲದ ತಪಾಸಣೆ. ತಿನ್ನಲೆಂದು ನನ್ನ ಅಕ್ಕ ಊರಿನಿಂದ ತಂದಿದ್ದ ದಾಳಿಂಬೆ,ಸೇಬುಗಳೆಲ್ಲ ಮಹಿಳಾ ಪೇದೆಯ ಪಾಲಾದವು. ಎಲ್ಲರ ತಪಾಸಣೆ ಮುಗಿದ ಬಳಿಕ ಮುಖ್ಯ ದ್ವಾರವನ್ನು ಪ್ರವೇಶ ಮಾಡಿದೆವು. ಒಳಗೆ ಕಾಲಿಡುತ್ತಿದ್ದಂತೆ ಕಂಡ ತಾಜ್ ಗಾಳಿಯಲ್ಲಿ ತೇಲುತ್ತಿರುವಂತೆ ನನಗೆ ಅನಿಸಿತು. ಮತ್ತೂ ಹತ್ತಿರ ಹೋದಾಗ ನಾನು ನೋಡುತ್ತಿರುವ ದ್ರಶ್ಯ ಕನಸಿನಂತೆ, ಯಾರೋ ಕಲಾವಿದ ಹಾಳೆಯಲ್ಲಿ ಬಿಡಿಸಿದ ಚಿತ್ರದಂತೆ ಕಂಡಿತು. ಸುಂದರವಾದ ಉದ್ಯಾನವಿದ್ದರೂ ನನ್ನ ದ್ರಷ್ಟಿ ಅತ್ತ ಹರಿಯುತ್ತಿಲ್ಲ. ನನ್ನ ಗಮನವೆಲ್ಲ ತಾಜ್ ಮಹಲ್ ನತ್ತಲೇ ಇತ್ತು. ಈ ಅನುಭವ ನನಗೆ ಮಾತ್ರವೇ ಆಗಿತ್ತಾ, ಗೊತ್ತಿಲ್ಲ."ಇಲ್ಲ, ಇದು ಕನಸು. ಇದು ಒಂದು ಮಾಯೆ, ಭ್ರಮೆ" ಎಂದೇ ನನಗೆ ಅನಿಸಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ