ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮತ್ಸ್ಯಲೋಕದಲ್ಲಿ ಒಂದು ದಿನ!

ಇಮೇಜ್
ದೇವಸ್ಥಾನಕ್ಕೆ ಹೋಗದೆ  ತುಂಬಾ ದಿನಗಳಾಗಿತ್ತು. ಎಲ್ಲಿಗಾದರೂ ಹೋಗಬೇಕು, ಎಲ್ಲಿಗೆ ಎಂದು ಒಂದಿಷ್ಟು ಸ್ಥಳಗಳ ಚರ್ಚೆಯಾಯಿತು.  ಕಾರಿಂಜ? ಉಹೂಂ , ಈ ಬಿಸಿಲಿಗೆ ಮೆಟ್ಟಿಲು ಹತ್ತಿ ಇಳಿಯುವುದು ಬೇಡ ಎಂದಳು ಅಮ್ಮ.  ಸುರಿಯ, ಕಟೀಲು, ಧರ್ಮಸ್ಥಳ, ಸೌತಡ್ಕ  ಯಾವುದಾದರೂ ಒಂದಕ್ಕೆ ಹೋಗೋಣ ಎಂದಳು. "ಹೋದಲ್ಲಿಗೆ ಎಷ್ಟು ಸಲ ಹೋಗುವುದು, ಉಹೂಂ ಬೇಡ" ಎಂದೆ ನಾನು. ಹೀಗೆ ಯಾವುದೋ ಪುಸ್ತಕ ತಿರುವಿ ಹಾಕುತ್ತಿದ್ದಾಗ ಶಿಶಿಲೇಶ್ವರ ದೇವಸ್ಥಾನದ ಬಗೆಗಿನ ವಿವರಗಳು ಕಂಡವು. "ಇದ್ಯಾವ ದೇವಸ್ಥಾನ? ನಾವು ಹೋಗಲೇ ಇಲ್ಲವಲ್ಲ ಒಂದು ಸಲವೂ?" ನಾನೆಂದಾಗ  "ಇಲ್ಲ, ತುಂಬಾ ವರ್ಷಗಳ ಹಿಂದೆ ಹೋಗಿದ್ದ ನೆನಪು " ಎಂದಳು ಅಮ್ಮ. ಅಲ್ಲಿನ ನದಿ,ತೂಗುಸೇತುವೆ, ಮುಖ್ಯವಾಗಿ ಮೀನುಗಳು    ಅದಾಗಲೇ ನನ್ನ ಮನಸ್ಸನ್ನು ಆಕರ್ಷಿಸಿದ್ದವು. ಸರಿ, ಚಿಕ್ಕದಾಗಿ ಒಂದು ಪಿಕ್ನಿಕ್ ಆದ ಹಾಗೆ ಆಯ್ತು, ಅಲ್ಲಿಗೇ  ಹೋಗುವುದೆಂದು ತೀರ್ಮಾನವಾಯಿತು. ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ  ಶಿಶಿಲ ಎಂಬ ಗ್ರಾಮದಲ್ಲಿರುವ ಶ್ರೀ ಶಿಶಿಲೇಶ್ವರ ದೇವಸ್ಥಾನ, ಧರ್ಮಸ್ಥಳದಿಂದ ಸುಮಾರು ಮೂವತ್ತೆರಡು ಕಿ.ಮೀ ದೂರದಲ್ಲಿದೆ.  ಮರುದಿನ  ಬೆಳಿಗ್ಗೆ ಒಂಭತ್ತಕ್ಕೆ ಮನೆಯಿಂದ ಹೊರಟು, ಅಲ್ಲಿಗೆ ತಲುಪುವಾಗ  ಗಂಟೆ ಹತ್ತೂಕಾಲು. ಹೊರಗಿನ ಜಗತ್ತು ಮತ್ತೆ ದೇವಸ್ಥಾನದ ಪರಿಸರದ ಮಧ್ಯೆ ಹರ...

ಕಿಟಕಿ ಬದಿಯ ಸೀಟಿನ ಮ್ಯಾಜಿಕ್

ಇಮೇಜ್
                                       ಕಿಟಕಿ ಬದಿಯ ಸೀಟು ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕಿಟಕಿ  ಬದಿಯ ಸೀಟಿನ ಮೇಲೆ ಏನೋ  ಆಕರ್ಷಣೆ .  ಮಕ್ಕಳು ಈ ಸೀಟಿಗೆ ಜಗಳವಾಡಿದರೆ, ದೊಡ್ಡವರು "ನನಗೆ ಅಲ್ಲೇ ಬೇಕು ಅಂತೇನಿಲ್ಲಪ್ಪ, ಎಲ್ಲಾದ್ರೂ ಸರಿ" ಎಂದರೂ ಕಣ್ಣುಗಳು ಮಾತ್ರ ಅಲ್ಲೇ ನೆಟ್ಟಿರುತ್ತವೆ. ಇನ್ನು ವಾಕರಿಕೆ  ಮಾಡಿಕೊಳ್ಳುವವರಿಗೆ ಇದು ಹಕ್ಕಿನ ಸ್ಥಳ.  "ನಂಗೆ ಒಮಿಟ್ ಬಂದಂತೆ ಆಗುತ್ತಿದೆ" ಎಂದರೆ ಸಾಕು, "ಸದ್ಯ, ಮೈಗೆ ಮಾಡದಿದ್ದರೆ ಸಾಕು"  ಎಂದುಕೊಂಡು ಕೂಡಲೇ ಕೂತವರು ಜಾಗ ಬಿಟ್ಟು ಕೊಡುತ್ತಾರೆ.  ವೃದ್ಧರಿಗೆ ಗಮ್ಯ ತಲುಪುವವವರೆಗೆ  ನಿದ್ದೆ ಮಾಡುವ ತಾತ್ಕಾಲಿಕ ಜಾಗವಾದರೆ, ಪ್ರೇಮಿಗಳಿಗೆ ಮೊಬೈಲ್ ನಲ್ಲಿ ಪಿಸುಗುಟ್ಟುತ್ತಾ ಮಾತಾಡಲು ಪ್ರಶಸ್ಥವಾದ ಸ್ಥಳ.  ಮೊಬೈಲ್ ನಲ್ಲಿ ಮೆಲ್ಲಗೆ ಮಾತಾಡುವುದು ಒಂದು ವಿದ್ಯೆಯೇ.  ಬಸ್ಸುಗಳ ಹಾರನ್ ಮಧ್ಯೆ, ಅಷ್ಟು ಮೆಲ್ಲಗೆ ಮಾತನಾಡಿದರೆ ಹೇಗೆ ಕೇಳಿಸುತ್ತದೆ ಎಂದು ಆಶ್ಚರ್ಯವಾಗುತ್ತದೆ. ಒಮ್ಮೆ ಏಕಲವ್ಯನಂತೆ, ನಾನೂ ಈ ವಿದ್ಯೆಯನ್ನು ಕಲಿಯಲೇಬೇಕು ಎಂದು ನಿರ್ಧರಿಸಿ  ಅಮ್ಮನಿಗೆ ಫೋನ್ ಮಾಡಿದೆ. ಇಯರ್ ಫೋನ್ ಹಾಕಿ ಸಣ್ಣಗೆ ...

ಶ್ವಾನ ಹೇಳಿದ ಭವಿಷ್ಯ

ಇಮೇಜ್
  ಧರ್ಮಸ್ಥಳದಲ್ಲಿ  ಲಕ್ಷದೀಪೋತ್ಸವ.ಅಕ್ಕನ ಮಗಳು ತುಂಬಾ ಖುಷಿಯಲ್ಲಿದ್ದಳು. ಅಲ್ಲಿಗೆ ಹೋದ ಮೇಲೆ ಏನೇನು ಮಾಡಬೇಕು, ತಿನ್ನಬೇಕು ಎಂಬ ಪಟ್ಟಿಯನ್ನು ದೊಡ್ಡ ಸ್ವರದಲ್ಲಿ ಹೇಳುತ್ತ್ತಿದ್ದಳು. "ಮೆಲ್ಲಗೆ ಹೇಳು" ಎಂದರೂ, ಲೌಡ್ ಸ್ಪೀಕರ್ ಸಣ್ಣದಾಗುವುದಿಲ್ಲ  ಎಂಬುದು ನನಗೆ ತಿಳಿಯದ ವಿಷಯವೇನಲ್ಲ. ಹಿಂದಿನ ದಿನವೇ ಜ್ವರ ಬಂದ ಕಾರಣ ಐಸ್ ಕ್ರೀಮ್ ತಿನ್ನಬೇಡ ವೆಂದು ಪದೇ ಪದೇ ನೆನಪಿಸುತ್ತಿದ್ದೆ. ಎಂದಿನಂತೆ "ಹೇಳಿದ್ದನ್ನೇ ಹೇಳಬೇಡ" ಎನ್ನಲಿಲ್ಲ. "ಓ...ಕೆ.. ಚಿಕ್ಕಮ್ಮ" ನಾಟಕೀಯವಾಗಿ ನುಡಿದಳು. ಹೋಗಿದ್ದೂ ಆಯಿತು. ಹಿಂತಿರುಗಿ ಬಂದದ್ದೂ ಆಯಿತು. ಏನೆಲ್ಲಾ ಮಾಡಿದೆ, ನೋಡಿದೆ, ತಂದೆ, ತಿಂದೆ ಇವುಗಳ ಸವಿಸ್ತಾರ ವರದಿಯೂ ಆಯಿತು.  ನನಗೆ ಗೋಭಿ ಮಂಚೂರಿ ಕಟ್ಟಿಸಿಕೊಂಡು ಬಂದಿದ್ದಳು. ತಂದ  ಬಿಲ್ಲು,ಬಾಣದ ಆಟಿಕೆಯೊಂದಿಗೆ ಆಡುತ್ತಿದ್ದವಳು ಪಕ್ಕನೆ "ಚಿಕ್ಕಮ್ಮ ಈ ಸರ್ತಿ  ನಾಯಿಯೊಂದು ಭವಿಷ್ಯ ಹೇಳುತ್ತಿತ್ತು.  ನಾವು ಕೇಳಲು  ಹೋಗಿದ್ದೆವು" ಎಂದಳು. "ಏನೆಲ್ಲಾ ಹೇಳಿತು?" ಎಂದೆ.  " ಫಸ್ಟ್ ಕ್ವೆಶ್ಚನ್ ಏನಂದ್ರೆ ಯಾರು ಸ್ಕೂಲಲ್ಲಿ ಫುಲ್ ಮಾರ್ಕ್ಸ್ ತೆಗೀತಾರೆ, ಹೋಮ್ ವರ್ಕ್  ಮಾಡ್ತಾರೆ" ಅಂತ ಅದರ ಓನರ್ ಕೇಳಿದ. ನಾಯಿ ನನ್ನತ್ರ ಬಂದು ನಿಂತಿತು" "ಮತ್ತೆ?" ಎಂದೆ. "ಮತ್ತೆ ಕೇಳಿದ, ಯಾರು ಗಂಡನ ಹತ್ತಿರ ತುಂಬಾ ಖರ್ಚು ಮಾಡಿಸ್ತಾರೆ ಅಂತ , ಅಮ್...

ಅರಿವು

                                                            ಕಥೆ - ೧ ಮೊಬೈಲ್ ನಲ್ಲಿ ತನ್ನ ಗೆಳತಿಗೆ ಸಂದೇಶ ಕಳುಹಿಸುತ್ತಿದ್ದಳು ಮಧುರಾ. ಮನೆಗೆ ಅವಳ ಅಜ್ಜಿಯ ತಂಗಿಯಂದಿರು ಬಂದಿದ್ದರು. ನೆಪ ಮಾತ್ರಕ್ಕೆ  ಅವರೊಂದಿಗೆ ಕುಳಿತಿದ್ದ ಅವಳ ಗಮನವೆಲ್ಲಾ ಮೊಬೈಲ್ ಮೇಲೆ ಕೇಂದ್ರೀಕೃತವಾಗಿತ್ತು.  ಗೆಳತಿಗೆ ವಿಷಯ ತಿಳಿಸಿದಳು. "ಓ! ಅಜ್ಜಿಯಂದಿರ ಹತ್ತಿರ ಚಾಟಿಂಗಾ, ಹಾ?" ಪ್ರಶ್ನಿಸಿದಳು ಗೆಳತಿ. "ಛೇ! ಇಲ್ಲಪ್ಪಾ, ಈ ವಯಸ್ಸಾದವರಲ್ಲಿ ನನಗೇನಿದೆ ಮಾತಾಡುವಂಥದ್ದು? ಹೇಗೆ ತಪ್ಪಿಸಿಕೊಳ್ಳುವುದು ಅಂತ ಯೋಚಿಸುತ್ತಿದ್ದೇನೆ"  ಅಸಡ್ಡೆಯಿಂದ ಉತ್ತರಿಸಿದ ಮಧುರಾ "ನಾನು ಓದಲಿಕ್ಕೆ ಹೋಗುತ್ತೇನೆ ಮಮ್ಮಿ" ಎಂದು ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಮಧುರಾಳಿಗೆ ಯೌವ್ವನ ಶಾಶ್ವತವಲ್ಲ, ತಾನೂ ಮುಂದೊಂದು ದಿನ ಮುದುಕಿಯಾಗುತ್ತೇನೆ ಎಂಬ ಸತ್ಯದ ಅರಿವು ಆಗಲೇ ಇಲ್ಲ.                                   ಕಥೆ - ೨ "ಯಾರಿದು? ಯಾವಾಗ ನೋಡಿದ್ರೂ ಚಾಟ್ ಮಾಡ್ತಿರ್ತೀಯ? ನಿನ್ನ ಎಲ್ಲ ಕಾಲೇಜ್  ಫೋಟೋ ದ...

ದೂರದ ಬೆಟ್ಟ

ಇಮೇಜ್
"ರ್ರೀ.. ಊಟ ರೆಡಿ, ಊಟ ಮಾಡಿ ಮತ್ತೆ ಟಿವಿ ನೋಡಬಾರದಾ ? ಎಷ್ಟು ಸಲ ಕರೆಯುವುದು ನಿಮ್ಮನ್ನು?" ಹೆಂಡತಿಯ ಕರೆಗೆ ಕಿಡಿ ಕಿಡಿಯಾದ ಸಂದೀಪ "ಆಯ್ತು ಮಾರ್ರಾಯ್ತಿ ಬರ್ತೇನೆ. ನನ್ನಷ್ಟಕ್ಕೆ ಇರಲಿಕ್ಕೂ ಬಿಡುವುದಿಲ್ಲಲ್ಲ ನೀನು " ಎಂದು ಗೊಣಗುತ್ತಾ  ಬಂದು ಸರಸರನೆ ಊಟ ಮುಗಿಸಿ ಮತ್ತೆ ಟಿವಿ ನೋಡತೊಡಗಿದ. "ಏನಾಗಿದೆ ಇವರಿಗೆ? ಸರಿಯಾಗಿ ಮುಖ ಕೊಟ್ಟು ಮಾತೂ ಆಡುವುದಿಲ್ಲ. ಆಫೀಸಿಗೆ ಹೋಗಿ ಬರುವುದು, ಟಿವಿ ಮುಂದೆ ಕೂತ್ಕೊಳ್ಳೋದು ಎರಡೇ ಕೆಲಸ. ಮನೆಯಲ್ಲಿ ಹೆಂಡತಿ ಅಂತ ಒಂದು ಪ್ರಾಣಿ ಇದೆ ಅಂತಲೂ ಗೊತ್ತಿಲ್ಲ ಇವರಿಗೆ" ಮನಸ್ಸಿನಲ್ಲಿಯೇ ಗೊಣಗಿಕೊಂಡಳು ವಸುಧಾ.                           ವಸುಧಾ ಡಬಲ್ ಗ್ರಾಜುವೇಟ್.  ಮದುವೆ  ಆದ ನಂತರ ಕೆಲಸಕ್ಕೆ ಹೋಗದೆ ಗಂಡ, ಸಂಸಾರ ಅಂತ ಮನೆಯಲ್ಲಿ ಉಳಿದು ಬಿಟ್ಟಳು.   ಬಿಡುವಿನ ವೇಳೆಯಲ್ಲಿ ಸಂಗೀತ, ಹೊಲಿಗೆ ಅಂತ ಹವ್ಯಾಸಗಳನ್ನು ಬೆಳೆಸಿಕೊಂಡಳು. ಸಂದೀಪನೂ  ಇದಕ್ಕೆ  ತಕರಾರು ತೆಗೆದಿರಲಿಲ್ಲ. .  ಒಂದು ದಿನ ತನ್ನ ಸಹೋದ್ಯೋಗಿ ಮನೆಗೆ ಊಟಕ್ಕೆ ಹೋದ ಸಂದೀಪ ಆತನ ಸಹೋದ್ಯೋಗಿಯ ಹೆಂಡತಿ ಸುರಭಿಯನ್ನು ಭೇಟಿ ಮಾಡಿದ. ಸುರಭಿ ಕೆಲಸಕ್ಕೆ ಹೋಗುವ ಹೆಣ್ಣುಮಗಳು. ಸಹಜವಾಗಿಯೇ ಗಂಡಸರಿಗೆ ಸರಿಸಮನಾಗಿ ನಿಂತು ಎಲ್ಲ ಕೆಲಸಗಳನ್ನು ಜಾಣ್ಮೆಯಿಂದ ನಿಭಾಯಿಸುತ್ತಿ...

ಮರಳಿ ಬಾ ಬಾಲ್ಯವೇ..

ಇಮೇಜ್
ಹೀಗೆ ಯಾರದೋ ಸಾಮಾಜಿಕ ಜಾಲತಾಣದ ಪುಟಗಳನ್ನು ಕ್ಲಿಕ್ಕಿಸುತ್ತಿರುವಾಗ ಸುಭದ್ರಾ ಕುಮಾರಿ ಚೌಹಾಣರ ಕವಿತೆಯ ಸಾಲು  ಓದಲು ಸಿಕ್ಕಿತು.         ಬಾರ್ ಬಾರ್ ಆತೀ ಹೇ ಮುಜ್ ಕೋ ಮಧುರ್ ಯಾದ್ ಬಚ್ ಪನ್ ತೇರೀ,          ಗಯಾ ಲೇ ಗಯಾ ತೂ  ಜೀವನ್ ಕೀ ಸಬ್ ಸೇ ಮಸ್ತ್ ಖುಷೀ ಮೇರೀ               ಹೈಸ್ಕೂಲಿನ ದಿನಗಳಲ್ಲಿ ಬಾಯಿಪಾಠ ಮಾಡಿಕೊಳ್ಳುತ್ತಿದ್ದ ಕವಿತೆಯಿದು. ಆಗ ಇದರ ಹಿಂದಿನ ಭಾವದ ಅರಿವಿರಲಿಲ್ಲ. ಏನು ಅರ್ಥಪೂರ್ಣವಾದ ಮಾತುಗಳು ಅವು! ಬಾಲ್ಯವೆಂಬುದು ಒಂದು ಆಹ್ಲಾದಕಾರವಾದ ನೆನಪು. ಅಲ್ಲಿ ದುಗುಡಗಳಿಗೆ ಆಸ್ಪದವಿಲ್ಲ, ನಿನ್ನೆ ನಾಳೆಗಳ ಬಗೆಗಿನ ವ್ಯಥೆಯಿಲ್ಲ.  ನಾನು ಹೋದದ್ದು ಸರಕಾರೀ ಕನ್ನಡ ಮಾಧ್ಯಮ ಶಾಲೆಗೆ. ಅವು ಪ್ರಾಥಮಿಕ ಶಾಲೆಯ ದಿನಗಳು. ಆಗೆಲ್ಲ ಈಗಿನಂತೆ ಕುರ್ಚಿ ಮೇಜುಗಳ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ತಗ್ಗಿನ ಬೆಂಚುಗಳು. ಕುಳಿತುಕೊಳ್ಳುವುದು,ಬರೆಯುವುದು ಏನಿದ್ದರೂ ಅದರ ಮೇಲೆಯೇ. ಶಾಲೆಗೆ ಎಂದು ಹೊರಟು ನಿಂತರೆ ನಮ್ಮ ಮನೆಯ ನಾಯಿ ಟಾಮಿ ಕೂಡ ಹೊರಟು ನಿಲ್ಲುತ್ತಿತ್ತು. ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾದ ನನ್ನನ್ನು ಕಂಡರೆ ಅದಕ್ಕೆ ವಿಶೇಷ ಕಾಳಜಿ . "ಏ ನೋಡಾ, ನಿ...

ಎಲ್ಲಿಗೀ ಪಯಣ

ಬಸ್ಸು ಶರವೇಗದಿಂದ ಬೆಂಗಳೂರಿಂದ ಮಂಗಳೂರಿಗೆ ಧಾವಿಸುತ್ತಿತ್ತು. ಸಹ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರೂ  ಮಾತ್ರ ನಿದ್ದೆ ಹತ್ತಿರಲಿಲ್ಲ.ಜಯಂತ, ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದವನು ರಜೆಯ ನಿಂತ್ತ  ಹೊರಟಿದ್ದ. ಆದರೆ ಮನೆಯಲ್ಲಿ ಮಾತ್ರ ಈ ಸಲ ತನಗೆ ಬರಲಾಗದು ಎಂದು ತಿಳಿಸಿದ್ದ. ಮನೆಯವರಿಗೆ ಸರ್ಪ್ರೈಜ್ ಕೊಡುವುದು ಅವನ  ಪ್ಲಾನ್ ಆಗಿತ್ತು. ಅವನ ಮನದಲ್ಲಿ ಸಂತಸದ ಅಲೆಗಳು ಏಳುತ್ತಿತ್ತು. ಹಬ್ಬವಾದ್ದರಿಂದ ಮನೆಯವರಿಗೆಲ್ಲ ಬಟ್ಟೆಗಳನ್ನು ಕೊಂಡುಕೊಂಡಿದ್ದ. "ತಂಗಿ ಮುಂದೆ ಅವಳಿಷ್ಟದ ಅನಾರ್ಕಲಿ ಡ್ರೆಸ್  ಹಿಡಿದರೆ ಅವಳ ಮುಖ ಹೇಗೆ ಅರಳಬಹುದು, ಅಪ್ಪ,ಅಮ್ಮ ಎಷ್ಟು ಖುಷಿ ಪಡಬಹುದು, ಅಮ್ಮನ ಕೈಯ ನೀರುದೋಸೆ ತಿಂದು ಎಷ್ಟು ದಿನ ಆಯಿತು"  ಯೋಚಿಸುತ್ತಿದ್ದವನಿಗೆ ಸಣ್ಣಗೆ ನಿದ್ದೆ ಆವರಿಸಿತು. ದಢಾರ್ ಅಂತ ಅಂತ ಸದ್ದು. ಏನಾಯ್ತು ಎಂದು ತಿಳಿಯುವ ಮೊದಲೇ ಜಯಂತನಿಗೆ ಪ್ರಜ್ಞೆ ತಪ್ಪುತ್ತಿರುವ ಅನುಭವ. ಪ್ರಯಾಣಿಕರ ಅಳು ಚೀರಾಟ ಕೇಳುತ್ತಿತ್ತು.  ಮನೆಯವರಿಗೆ ಸಪ್ರೈಜ್ ಕೊಡಲು ಹೊರಟ  ಜಯಂತ ಮತ್ತೆಂದೂ ಬಾರದ  ಲೋಕಕ್ಕೆ  ಪಯಣಿಸಿದ್ದ.  

ಒಂದು ಕನಸಿನ ಕಥೆ

ಇಮೇಜ್
ಬಸ್ಸು ಎಂದಿನಂತೆ ಜನರಿಂದ ತುಂಬಿ ತುಳುಕುತ್ತಿತ್ತು. ಅಂತೂ ಹೇಗೋ ಮಾಡಿ ಸೀಟನ್ನು ಹಿಡಿದಳು ತೇಜಸ್ವಿನಿ. ನಿತ್ಯವೂ ಇದೇ ಗೋಳು. ಆದರೆ ಏನು ಮಾಡುವುದು,ಕಾಲೇಜಿಗೆ ಹೋಗಲು ಇದೇ ಬಸ್ ಆಗಬೇಕು.  "ಇನ್ನೊಂದು ವರ್ಷ ಅಷ್ಟೆ, ಆಮೇಲೆ ಈ ಬಸ್ ಓಡಾಟ ಮುಗೀತದೆ" ಮನದಲ್ಲಿ ಅಂದುಕೊಂಡಳು. ಮುಂದಿನ ಸ್ಟಾಪ್ ನಲ್ಲಿ ಮಗು ವನ್ನೆತ್ತಿಕೊಂಡ ಮಹಿಳೆ ಒಬ್ಬಳು ಬಸ್ ಹತ್ತಿದಳು.  ಸೀಟ್ನಲ್ಲಿ ಕೂತ ತೇಜಸ್ವಿನಿ ಜಾಗ ಬಿಟ್ಟು ಕೊಡಲೆತ್ನಿಸಿದಾಗ ಕುಳಿತು ಕೊಳ್ಳುವಂತೆ ಸನ್ನೆ ಮಾಡಿದ ಮಹಿಳೆ ತನ್ನ ಕೈಯಲ್ಲಿ ದ್ದ ಮಗುವನ್ನು ಅವಳಿಗೆ ಕೊಟ್ಟಳು. ಏನಾಶ್ಚರ್ಯ! ಕಿಂಚಿತ್ತೂ ಕೊಸರಾಡದೆ ತೇಜಸ್ವಿನಿ ತೊಡೆಯಲ್ಲಿ ಕುಳಿತು ಕೊಂಡಿತು. ಅವಳ ಕೂದಲಿನಲ್ಲಿ ಆಟವಾಡತೊಡಗಿತು. "ಎಲ್ಲಿ ಇಳಿಯುವುದು ನೀವು?" ಆ ಮಹಿಳೆಯನ್ನು ವಿಚಾರಿಸಿದಳು. "ಕಾಲೇಜು ಸ್ಟಾಪಿನ ಹಿಂದಿನ ಸ್ಟಾಪ್". ಮತ್ತೇನು ಮಾತನಾಡಲು ತೋಚದೆ ಕಿಟಕಿಯತ್ತ ದೃಷ್ಟಿ ಹಾಯಿಸಿದಳು. ಕಾ ಲೇಜು ತಲುಪಲು ಇನ್ನು ಇಪ್ಪತ್ತು ನಿಮಿಷಗಳು  ಉಳಿದಿದೆ ಎನ್ನುವಷ್ಟರಲ್ಲಿ ಒಂದು ಸ್ಟಾಪ್ ಬಂದಿತು. ತೇಜಸ್ವಿನಿ ನೋಡುತ್ತಿರುವಂತೆ ಆ ಮಹಿಳೆ ಜನ ಜಂಗುಳಿಯ ಮಧ್ಯೆ ತೂರಿ ಮುಂಬಾಗಿಲಿನಿಂದ ಇಳಿದುಬಿಟ್ಟಳು. "ಓಯ್..ನಿಮ್ಮ ಮಗು"  ಹೇಳಲೆತ್ನಿಸಿದರೂ ಗಂಟಲಿನಿಂದ ಸ್ವರ ಬರುತ್ತಿಲ್ಲ. "ಅಯ್ಯೋ, ಇಳಿದು ಬಿಟ್ಟರಲ್ಲ ಏನು ಮಾಡಲಿ, ಬ್ಯಾಗ್ ಮರೆಯುವುದು ಕೇಳಿದ್ದೇನೆ. ಮಗುವನ್ನು ಮರೆತು ಹ...