ಪೋಸ್ಟ್‌ಗಳು

ಜಾನಕಿ ಮತ್ತು ಅವಳ ನಾಯಿ

ಬೆಳಗ್ಗಿನ ಉಪಹಾರ ಮುಗಿಸಿ ಎಂದಿನಂತೆ ಹೊರಗೆ ಬಂದು ನೋಡುತ್ತೇನೆ   ಜಾನಕಿಯ ನಾಯಿ ನೆರೆ ಮನೆಗೆ ಬಂದಿದೆ. “ಇದು ಹೇಗೆ ಸಾಧ್ಯ? ಜಾನಕಿ ಇಲ್ಲವಲ್ಲ, ಮತ್ತೆ ಅವಳ ನಾಯಿ ಹೇಗೆ ಬಂತು?” ಸೂಕ್ಷ್ಮವಾಗಿ ಗಮನಿಸಿದಾಗ ಜಾನಕಿ ನಿಂತಿರುವುದು ಕಂಡಿತು. ಇಲ್ಲಿದೆ ಜಾನಕಿ ನಾಯಿ ಬಂದಿರುವ ಗುಟ್ಟು. “ಅವಳು ಬರದೆ ತಿಂಗಳಾಯಿತಲ್ಲ, ಇವತ್ತು ಬಂದಳೇನು?” ಎಂದುಕೊಂಡೆ. ಜಾನಕಿ ನೆರೆಮನೆಗೆ ಬರುವ ಕೆಲಸದವಳು. ಅವಳೊಂದಿಗೆ ಬಂದು, ಅವಳೊಡನೇ ಇದ್ದು,ಸಂಜೆ ಯಥಾವತ್ ಅವಳೊಡನೇ ಹಿಂತಿರುಗುವುದು ಅವಳ ನಾಯಿಯ ನಿತ್ಯದ ದಿನಚರಿ. ಇಂತಿಪ್ಪ ಜಾನಕಿಯ ನಾಯಿಯೇನು ಪೊಮೊರಿಯನ್,ಲ್ಯಾಬ್ರಡಾರ್, ಜರ್ಮನ್ ಶೆಫ಼ರ್ಡ್ ಅಥವಾ ಇನ್ನಿತರ ಹೆಸರುವಾಸಿ ತಳಿಯದ್ದಲ್ಲ. ಪಕ್ಕಾ ಲೋಕಲ್ ಕಂತ್ರಿ ನಾಯಿ. ಮುದ್ದು ಮುದ್ದಾಗಿ ಇರುವುದೇ ಎಂದರೆ ಅದೂ ಇಲ್ಲ. ಆದರೆ ಸ್ವಾಮಿ ನಿಷ್ಠೆಯ ವಿಷಯದಲ್ಲಿ ಮಾತ್ರ ಯಾವ ತಳಿಯ ನಾಯಿಗೂ ಕಮ್ಮಿ ಇಲ್ಲ ಎನ್ನಬಹುದು. ತನ್ನ ಒಡತಿ ಕೆಲಸಕ್ಕೆಂದು  ಎಲ್ಲಿ ಹೋಗುತ್ತಾಳೋ ಆ ಮನೆಯೇ ಅದರ ತಾತ್ಕಾಲಿಕ ವಾಸಸ್ಥಾನ.   ಶಿಸ್ತಿನ ವಿಷಯದಲ್ಲಿ ಜಾನಕಿಯ ನಾಯಿ ತುಂಬಾ ಕಟ್ಟುನಿಟ್ಟು. ತನ್ನ ಒಡತಿಯನ್ನು ಬಿಟ್ಟು ಒಂದಿಂಚೂ ಅತ್ತಿತ್ತ ಸರಿಯುವುದಿಲ್ಲ. ಕಣ್ಣಂಚಿನಲ್ಲಿ ಸನ್ನೆ ಮಾಡಿ ಸ್ನೇಹಿತೆಯನ್ನು(ನಾಯಿ) ತನ್ನ ಬಳಿಗೆ ಕರೆಸಿಕೊಂಡು ಚೂರು ಹೊತ್ತು ಆಟ ಆಡಿ, ನಂತರ ನಿದ್ದೆ ಹೋಗುತ್ತದೆ.               ಅದರ ಈ ವಿಶಿಷ್ಠ ಗುಣವೇ ನನ್ನನ್ನು ಅದರತ್ತ ಸೆಳೆಯುತ್ತದೆ. ಆದ್

ಅಂತೂ ನಾನೂ ಒಂದು ಕವನ ಬರೆದೆ

ದೀಪಾವಳಿ ಹತ್ತಿರ ಬರುತ್ತಿದ್ದಂತೆ ನಾಲ್ಕಾರು ಪತ್ರಿಕೆಯಲ್ಲಿ ಕಥಾ ಸ್ಪರ್ಧೆ ಬರುತ್ತಿದ್ದಂತೆ ಕಥೆ ಬರೆಯುವ ಕೆಲಸ ಶುರು. ಕಥೆ ಬರೆಯಬೇಕೆಂದರೆ ಅದಕ್ಕೆ ಸರಿಯಾಗಿ ಮನಸ್ಥಿತಿ ಇರಬೇಕು. ಕಲ್ಪಿಸಬೇಕು, ಕಲ್ಪನೆ ದ್ರಶ್ಯವಾಗಿ ಮನಃಪಟಲದಲ್ಲಿ ಹರಿಯಬೇಕು. ಆ ಕಥೆಯಲ್ಲಿ ನಾನೂ ಒಂದು ಪಾತ್ರವಾಗಿ ಇರಬೇಕು. ಓದುಗಳಾಗಿ ವ್ಹಾ ವ್ಹಾ ಎನ್ನಬೇಕು. ಇಷ್ಟೆಲ್ಲಾ ಆದರೆ ಮಾತ್ರವೇ ಬರೆದ ಕಥೆ ತ್ರಪ್ತಿ ತರಲು ಸಾಧ್ಯ. ಹೀಗೆ ನಡೆದ ಘಟನೆಗಳನ್ನು ಅವಲೋಕಿಸುತ್ತಾ, ಪಾತ್ರಗಳನ್ನು ಕಲ್ಪಿಸಿ ಒಂದು ಕರಡು ಪ್ರತಿ ತಯಾರಾಯಿತು. ಅದೇ ಪ್ರತಿ ಅಂತಿಮ ಪ್ರತಿಯಾಗುವಾಗ ಮತ್ತೊಂದಿಷ್ಟು ತಿದ್ದುಪಡಿ. ಇದರ ಮಧ್ಯದಲ್ಲಿ ಬರೆದ ಕಥೆ ಏನೆಂದು ತಿಳಿಯಲು ಅಮ್ಮ ಮಾಡುವ ವ್ಯರ್ಥ ಪ್ರಯತ್ನ. ನನ್ನನ್ನು ನೋಡುತ್ತಾ ಕುಳಿತ ಅಮ್ಮನಿಗೂ ತಾನೂ ಏಕೆ ಏನಾದರೂ ಬರೆಯಬಾರದು ಎನಿಸಿತು. ಆಗ ಕಂಡಿತು ಚಿತ್ರಕ್ಕೆ ಒಂದು ಕವನ ಸ್ಪರ್ಧೆ. "ಏ, ಈ ಚಿತ್ರಕ್ಕೆ ಒಂದು ಕವನ ಸುಲಭವಾಗಿ ಬರೆಯಬಹುದು. ನೀನೇಕೆ ಬರೆಯಬಾರದು?" ನಾನೋ ಕವನದ ವಿಷಯದಲ್ಲಿ ಸೊನ್ನೆ . ಓದಲು ಇಷ್ಟವಿದ್ದರೇನು,ಬರೆಯಲು ಬರಬೇಕಲ್ಲ. ಬೇರೆಯವರು ಬರೆದದ್ದನ್ನು ನೋಡಿ ಎಷ್ಟೋ ಸಲ ಬರೆಯಬೇಕು ಅಂತ ಅನಿಸಿದ್ದಿದೆ. ಪದಗಳು ಮೂಡುವುದಿಲ್ಲ. ಚಿತ್ರ ನೋಡಿದೆ, ಏನೂ ತೋಚಲಿಲ್ಲ "ಅಯ್ಯೋ, ನನ್ನಿಂದಾಗದು. ಇಲ್ಲಿ ಕಥೆಗೆ ಶೀರ್ಷಿಕೆ ಸಿಗದೆ ಪೇಚಾಡುತ್ತಿದ್ದೇನೆ, ಕವನ ಬರೆಯಬೇಕಂತೆ". "ಆಯ್ತು, ನೀನು ಬರೀಬೇಕು ನಾನೇ ಬರ

ಅಡ್ಡ(nick) ಹೆಸರಿನ ಮಹತ್ವ!

"ಚಿಕ್ಕಮ್ಮ, ನಿನ್ನ ನಿಕ್ ನೇಮ್ ಏನು?" "ನಂಗೆ ನಿಕ್ ನೇಮ್ ಇಲ್ಲ" ಚಟ್ಟಿಗೆ ನೀರೆರೆಯುತ್ತಿದ್ದ ನಾನೆಂದೆ. "ಯಾಕಿಲ್ಲ, ಎಲ್ಲರಿಗೂ ನಿಕ್ ನೇಮ್ ಇರುತ್ತದಂತೆ,ನಿನಗೆ ಯಾಕಿಲ್ಲ? ಹೋಗಲಿ ಅಮ್ಮನಿಗೆ?" ತನ್ವಿ ಪುನಃ ಪ್ರಶ್ನಿಸಿದಳು. " ಅಮ್ಮನಿಗೂ ಇಲ್ಲ, ಯಾಕೆ ಅಂತ ನನ್ನನ್ನು ಕೇಳಬೇಡ, ಅಜ್ಜ ಅಜ್ಜಿಯನ್ನು ಕೇಳು" ನನ್ನತ್ತ ಕನಿಕರದ ನೋಟ ಬೀರಿದವಳು "ಯಾರೂ ಇಡದಿದ್ರೆ ನಾನಿಡ್ತೇನೆ ಆಯ್ತಾ? ಚಿಕ್ಕಿ ಅಂತ ನಿನ್ನ ನಿಕ್ ನೇಮ್" ಎಂದು ಒಳಗೋಡಿದಳು ತನ್ವಿ. ಸರಿ, ಈ ನಿಕ್ ನೇಮ್ ವಿಷಯ ಇಲ್ಲಿಗೆ ನಿಂತಿತಲ್ಲ ಎಂದುಕೊಂಡರೆ ರಾತ್ರಿ ಮತ್ತದೇ ಪ್ರಶ್ನೆ "ಅಜ್ಜ, ನೀವು ನನಗೊಂದು ನಿಕ್ ನೇಮ್ ಇಡಬೇಕು,ಹಾಗೇ ಕರೀಬೇಕು" "ನಿನ್ನ ನಿಕ್ ನೇಮ್ ಪುಳ್ಳಿ ಆಯ್ತಾ?" ಅಪ್ಪನ ಮಾತಿನಿಂದ ಅವಳಿಗೆ ಸಮಾಧಾನ ಆದಂತೆ ಕಾಣಲಿಲ್ಲ."ಪುಟ್ಟ ಅಂತ ಕರೀತೇನೆಲ್ಲ ಅದೇ ನಿನ್ನ ನಿಕ್ ನೇಮ್" ನಾನೆಂದೆ. "ಊಹೂಂ, ಅದಲ್ಲ" ಎಂದವಳು ಸುಮ್ಮನಾದಳು. "ಚಿಕ್ಕಮ್ಮ, ನಾನೊಂದು ಹೇಳ್ತೇನೆ" ರಾತ್ರಿ ಮಲಗಿದವಳೆಂದಳು."ಬೇಗ ಹೇಳು" "ನನ್ನನ್ನು ನಿಕ್ ನೇಮ್ ಇಂದ ಕರೀಬೇಕು ನೀನು" ಅಳುವಂತಿತ್ತು ಅವಳ ಧ್ವನಿ. "ಎಂತಾ ಪಿರಿ,ಪಿರಿ ನಿನ್ನದು ,ನಿಕ್ ನೇಮ್ ನಲ್ಲಿ ಎಂತ ಉಂಟು ಸುಮ್ಮನೆ" "ಉಂಟು, ಛೋಟಾ ಭೀಮ್ ನಲ್ಲಿ ಪ್ರಿನ್ಸೆಸ್ ಇಂ

ಆಪತ್ಬಾಂಧವ

ಇಮೇಜ್
ನಾಯಿ ಒಂದೇ ಸಮನೆ ಬೊಗಳಲಾರಂಭಿಸಿತು. ಯಾರಿರಬಹುದೆಂದು ಬಾಗಿಲು ತೆರೆದು ನೋಡಿದಳು ವಿನಯ.  ಅಂಚೆಯವನು ಪತ್ರವೊಂದನ್ನು ಇರಿಸಿ ಹೋಗಿದ್ದ. ತೆರೆದು ನೋಡಿದಳು. ಖ್ಯಾತ ಲೇಖಕ ದಿವಾಣಜಿ ಅವರ ಜನ್ಮ ದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಾಗಿತ್ತು. ಅದರೊಂದಿಗೆ ಇರಿಸಿದ್ದ ಪತ್ರವನ್ನು ಬಿಡಿಸಿ ಓದಿದಳು. “ಕು| ವಿನಯ ಅವರು ದಿವಂಗತ ದಿವಾಣಜಿ ಅವರ ಸ್ಮರಣೆಯ ಪ್ರಯುಕ್ತ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಗಳಿಸಿದ್ದಾರೆ. ಸಮಾರಂಭಕ್ಕೆ ಬಂದು ಸನ್ಮಾನಾದಿಗಳನ್ನು ಸ್ವೀಕಾರ ಮಾಡಬೇಕಾಗಿ ವಿನಂತಿ”. “ಅಮ್ಮಾ.. ನಾನು ಬರೆದು ಕಳಿಸಿದ ಕಥೆಗೆ ಬಹುಮಾನ ಬಂದಿದೆ” ಸಂತಸದಿಂದ ವಿನಯಳ ಸ್ವರ ದೊಡ್ಡದಾಯಿತು. “ಹೌದಾ? ಎಷ್ಟನೇ ಬಹುಮಾನ? ಎಲ್ಲಿ ಕೊಡ್ತಾರೆ? ಯಾವಾಗ?” ಪ್ರಶ್ನೆಗಳ ಸುರಿಮಳೆಗೈದ ವಿನಯಳ ತಾಯಿ ಕವಿತಾ, ಪತ್ರವನ್ನು ಕೈಯಿಂದ ಹಿಡಿದೆಳೆದು ಓದಲಾರಂಭಿಸಿದಳು. “ಓ! ತೃತೀಯ ಬಹುಮಾನ ಬಂದಿದೆ. ಪರ್ವಾಗಿಲ್ಲ. ಆದ್ರೆ ಕಾರ್ಯಕ್ರಮದ ಸ್ಥಳ ಮಾತ್ರ ಮುಂಬಯಿ, ಡೊಂಬಿವಿಲಿ ಪೂರ್ವ ಅಂತ ಉಂಟಲ್ಲ. ಹೇಗೆ ಹೋಗುವುದು? ಅಲ್ಲಿ ನಮ್ಮ ಗುರ್ತದವರು ಅಂತ ಯಾರೂ ಇಲ್ಲಲ್ಲ. ಅಪ್ಪನತ್ರ ಕೇಳ್ಬೇಕಷ್ಟೇ”. ಅಷ್ಟು ಹೇಳಿದ್ದೇ ತಡ ವಿನಯಳ ಉತ್ಸಾಹ ಇಳಿಯಿತು. “ಹೌದಲ್ಲ, ಅಂಜನಕ್ಕ ಇದ್ದಿದ್ರೆ ಒಳ್ಳೇದಿತ್ತು. ಆದ್ರೆ ಅವಳು ಮುಂಬೈಯಿಂದ ಯು.ಎಸ್ ಹೋದಳಲ್ಲಾ" ಮನದಲ್ಲಿ ಅಂದುಕೊಂಡಳು. “ಅಪ್ಪನತ್ರ ಕಾಮತ್ ಅವರತ್ರ ಕೇಳಲ

ಅಪಾರ್ಥ

ಇಮೇಜ್
"ಬಚಾವ್, ಬಸ್ ಖಾಲಿ ಉಂಟು ಪುಣ್ಯಕ್ಕೆ" ಬಸ್ ಹತ್ತಿದ ಸುಮ ಕಿಟಕಿ ಪಕ್ಕದ ಸೀಟನ್ನು ಹಿಡಿದು ಅಂದುಕೊಂಡಳು. ಬೆಳಗ್ಗೆ ಐದಕ್ಕೆ ಎದ್ದ ಕಾರಣ ಕಣ್ಣೆಳೆಯುತ್ತಿತ್ತು. ಹಣ ಕೊಟ್ಟು ಟಿಕೆಟ್ ಪಡೆದ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದವಳಿಗೆ ಪಕ್ಕದಲ್ಲಿ ಯಾರು ಕೂತರೂ ತಿಳಿಯಲಿಲ್ಲ. ಮೂರು ಜನ ಕುಳಿತುಕೊಳ್ಳುವ ಸೀಟು. ಬಸ್ಸು ಸುಮಾರು ದೂರ ಸಾಗಿರಬೇಕು ಯಾರೋ ಪಕ್ಕದಲ್ಲಿ ಧೊಪ್ಪನೆ ಕುಳಿತ ಅನುಭವ. ಆ ವ್ಯಕ್ತಿಯ ತೊಡೆ ಇವಳ ತೊಡೆಗೆ ತಾಗುತ್ತಿತ್ತು. "ಮಹಿಳೆಯರ ಸೀಟಲ್ವೇ" ಎಂದುಕೊಂಡರೂ ಯಾರಿರಬಹುದೆಂಬ ಕುತೂಹಲದಿಂದ ಸ್ವಲ್ಪವೇ ಕಣ್ಣು ತೆರೆದು ನೋಡಿದಳು.  ಕಪ್ಪು ಕನ್ನಡಕ ಧರಿಸಿದ ಗಂಡಸು ಎಂದು ತಿಳಿದ ತಕ್ಷಣ ನಿದ್ದೆ ಹಾರಿ ಹೋಯಿತು. ಚೂರು ಸರಿದು ಆತನ ಮೈ ತಾಕದಂತೆ ಕುಳಿತಳು. ಎಷ್ಟೇ ಜಾಗ್ರತೆ ಮಾಡಿದರೂ ಅತ್ತಿಂದಿತ್ತ ಓಲಾಡುವಾಗ ಮೈ ತಾಗುತ್ತಿತ್ತು. "ಛೇ, ಇಬ್ಬರು ಹೆಂಗಸರ ಮಧ್ಯೆ ಕುಳಿತುಕೊಳ್ಳುವ ಅಗತ್ಯ ಏನಿತ್ತು. ಅದೂ ಲೇಡೀಸ್ ಸೀಟಲ್ಲಿ." ಸುತ್ತಲೂ ಗಮನ ಹರಿಸಿದಳು. ಹೆಂಗಸರು ನಿಂತಿದ್ದರು. "ಇಷ್ಟು ಹೆಂಗಸರು ನಿಂತಿರುವಾಗ ಇವನೊಬ್ಬ ಆರಾಮಾಗಿ ಕುಳಿತಿದ್ದಾನಲ್ಲ" ಮನದಲ್ಲಿ ಬೈದಳು.  "ಪಡೀಲು ಬಂತಾ?"  ಆತ ಸುಮನಲ್ಲಿ ಕೇಳಿದ."ನನ್ನತ್ರ ಯಾಕೆ ಕೇಳ್ತೀ? ಕಣ್ಣು ಬಿಟ್ಟು ನೋಡು ನಿಂಗೆ ಕಾಣ್ತದೆ ಮಂಗ" ಎಂದು ಮನದಲ್ಲಿ ಬೈದರೂ "ಮುಂದಿನ ಸ್ಟಾಪ್ ಪಡೀಲ್" ಎಂ

ನೀರ ಮೇಲಣ ಗುಳ್ಳೆ

ಇಮೇಜ್
"ನೀರಿನಲ್ಲಿ ಮುಳುಗಿ ನಟನೊಬ್ಬನ ದುರ್ಮರಣ" ಎಂಬ ಶೀರ್ಷಿಕೆಯೊಂದಿಗ ವಾಹಿನಿಯಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. "ಈಜು ಬರಲ್ಲ, ಆದ್ರೂ ಶಾಟ್ ಮಾಡೋದಿಕ್ಕೆ ರೆಡಿ, ಮುಂದಿದ್ದನ್ನ ದೇವ್ರು ನೋಡ್ಕೋತಾನೆ ಎಂಬ ನಂಬಿಕೆ ಇದೆ" ಸಾಯುವ ಸ್ವಲ್ಪ ಹೊತ್ತಿನ ಮುಂಚೆ ನಡೆದ ಸಂದರ್ಶನದಲ್ಲಿ ನಟನಾಡಿದ ಕೊನೆಯ ಮಾತುಗಳಾಗಿದ್ದವು ಅವುಗಳು.  "ಈಜು ಬರದೆ ಶಾಟ್ ಮಾಡೋದಿಕ್ಕೆ ಒಪ್ಕೋಬಾರದಿತ್ತು" ಅಲ್ಲೇ ನೆರೆದಿದ್ದ ಜನರು ಮಾತನಾಡಿಕೊಂಡರು. ಸುದ್ದಿ ನೋಡಿ ಟಿವಿ ಆರಿಸಿದ ಚೇತನ್ ಆಫೀಸಿಗೆ ಹೊರಟ. ದಾರಿಯುದ್ದಕ್ಕೂ ಅದೇ ಘಟನೆ ಅವನ ಕಣ್ಮುಂದೆ ಸುಳಿದಾಡುತ್ತಿತ್ತು. ಎಂದಿನಂತೆ ಯಾಂತ್ರಿಕವಾಗಿ ಕೆಲಸ ಮುಗಿಸಿ ಬಂದವನು ಹಾಸಿಗೆಯಲ್ಲುರುಳಿದನು. ಪತ್ನಿ, ಮಕ್ಕಳಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ದೀಪಾವಳಿ ಹಬ್ಬಕ್ಕೆಂದು ಅವರೆಲ್ಲರೂ ಸ್ವಲ್ಪ ದಿನ ಮುಂಚಿತವಾಗಿಯೇ ಊರಿಗೆ ತೆರಳಿದ್ದರು.  "ಏನ್ರೀ ಹಬ್ಬದ ದಿನಗಳಲ್ಲಿಯೂ ನಿಮ್ಮ ಕೆಲಸ ಇದ್ದೇ ಇರ್ತದೆ. ಎಲ್ಲರೂ ಹಬ್ಬಾಂತ ಊರಿಗೆ ಹೊರಟಿದ್ದಾರೆ. ನೀವು ಮಾತ್ರ ಕೆಲಸ, ಕೆಲಸ ಅಂತ ಒದ್ದಾಡ್ತೀರ. ಅಷ್ಟಕ್ಕೂ, ನಿಮ್ಮದೇ ಆಫೀಸ್, ನೀವೇ ಬಾಸ್. ಹಬ್ಬದ ದಿನಗಳಲ್ಲಾದರೂ ಕೆಲಸ ಪಕ್ಕಕ್ಕಿಟ್ಟು ಮನೆಯವರ ಜೊತೆ ಇರಬಾರದಾ? ನೀವೂ ಬಂದಿದ್ದರೆ ಅತ್ತೆ,ಮಾವ,ಅಪ್ಪ, ಅಮ್ಮ ಎಲ್ಲ ಖುಷಿ ಪಡುತ್ತಿದ್ದರು" ಪತ್ನಿ ಹೋಗುವ ಹಿಂದಿನ ದಿನ ಅಸಮಾಧಾನದಿಂದ ನುಡಿದಿದ್ದಳು. ಚೇತನ್ ತುಟಿಪಿಟಿಕ್ಕ

ಮನ ಮುದಗೊಳಿಸುವ, ಅನುಭವ ತರಿಸುವ ಪ್ರವಾಸಿ ತಾಣಗಳು

ಇಮೇಜ್
ಮರುದಿನ ಬೆಳಗ್ಗೆ ಎದ್ದಾಗ ಗಂಟೆ ಏಳು. ಆ ದಿನ ವಚನ ಸಾಹಿತ್ಯ ಸಮ್ಮೇಳನದ ದಿನವಾದ್ದರಿಂದ ಮತ್ತು ಆ ಕಾರ್ಯಕ್ರಮದ ಅಂಗವಾಗಿ ಈ ಪ್ರವಾಸ ಯೋಜನೆ ಇದ್ದುದರಿಂದ ಬೇರೆ ತಾಣಗಳನ್ನು ನೋಡುವ ಅಂದಾಜಿನಲ್ಲಿ ನಾವಿರಲಿಲ್ಲ. "ದಿಲ್ಲಿ ಮೇ ಅಕ್ಷರಧಾಮ್ ನಹೀ ದೇಖಾ ತೋ ಕ್ಯಾ ದೇಖಾ?" (ದೆಹಲಿಯಲ್ಲಿ ಅಕ್ಷರಧಾಮ ನೋಡದೆ ಇದ್ದರೆ, ಬೇರೆ  ತಾಣ ನೋಡಿಯೂ ಏನು ಪ್ರಯೋಜನ) ಎಂಬ ಬರಹಗಳನ್ನು ಅಂತರ್ಜಾಲ ದಲ್ಲಿ ಓದಿದ್ದೆ. ಆದರೆ ನಾವು ಬಂದ ರೈಲು ಅಂದುಕೊಂಡಿದ್ದ ಸಮಯಕ್ಕಿಂತ ತಡವಾಗಿ ದೆಹಲಿಗೆ ತಲುಪಿ ಆ ದಿನದ ಅಕ್ಷರಧಾಮದ ಕಾರ್ಯಕ್ರಮ ರದ್ದಾಗಿತ್ತು. ಆದರೆ ಅನಿರೀಕ್ಷಿತವಾಗಿ ಕಾರ್ಯಕ್ರಮದ ಆಯೋಜಕಿ ಬಂದು "ಕಾರ್ಯಕ್ರಮ ಇರುವುದು ನಾಲ್ಕು ಗಂಟೆಗೆ, ನ್ರತ್ಯಕ್ಕಿರುವವರು ಬಿಟ್ಟು ಉಳಿದವರು ಹೋಗುವುದಿದ್ದರೆ ವ್ಯವಸ್ಥೆ ಮಾಡ್ತೇವೆ" ಎಂದಾಗ ನನ್ನ ಸಂತೋಷಕ್ಕೆ ಎಣೆಯೇ ಇಲ್ಲದಂತಾಗಿತ್ತು. ಬೇಗನೆ ತಯಾರಾಗಿ ಹೊರಟ ನಮ್ಮ ತಂಡ ನಾಲ್ಕು ಬಾಡಿಗೆ ಕಾರಲ್ಲಿ ಅಕ್ಷರಧಾಮ ಕ್ಕೆ ಹೊರಟಿತು.  ಸುಮಾರು ಒಂದು ಗಂಟೆಯ ಬಳಿಕ ಗಮ್ಯ ಸ್ಥಳ ತಲುಪಿದೆವು. ಅಕ್ಷರಧಾಮದಲ್ಲಿ ಹಣದ ಚೀಲದ ಹೊರತಾಗಿ ಏನನ್ನೂ ಒಳಗೆ ಒಯ್ಯುವಂತಿಲ್ಲ. ಕುಡಿಯುವ ನೀರಿನಿಂದ ಹಿಡಿದು, ತಿನ್ನಲು, ಶೌಚದ ಹೀಗೆ ಎಲ್ಲಾ ವ್ಯವಸ್ಥೆಯೂ ಇದೆ. ಸರತಿ ಸಾಲಿನ ವ್ಯವಸ್ಥೆ ನೋಡಿದ ನನಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ನೆನಪಾಯಿತು. ಅಷ್ಟೊಂದು ಜನರಿದ್ದರೂ ಎಲ್ಲವೂ ಅಚ್ಚುಕಟ್ಟು,ನೂಕು ನುಗ್ಗಲು ಎ