ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಂತೂ ನಾನೂ ಒಂದು ಕವನ ಬರೆದೆ

ದೀಪಾವಳಿ ಹತ್ತಿರ ಬರುತ್ತಿದ್ದಂತೆ ನಾಲ್ಕಾರು ಪತ್ರಿಕೆಯಲ್ಲಿ ಕಥಾ ಸ್ಪರ್ಧೆ ಬರುತ್ತಿದ್ದಂತೆ ಕಥೆ ಬರೆಯುವ ಕೆಲಸ ಶುರು. ಕಥೆ ಬರೆಯಬೇಕೆಂದರೆ ಅದಕ್ಕೆ ಸರಿಯಾಗಿ ಮನಸ್ಥಿತಿ ಇರಬೇಕು. ಕಲ್ಪಿಸಬೇಕು, ಕಲ್ಪನೆ ದ್ರಶ್ಯವಾಗಿ ಮನಃಪಟಲದಲ್ಲಿ ಹರಿಯಬೇಕು. ಆ ಕಥೆಯಲ್ಲಿ ನಾನೂ ಒಂದು ಪಾತ್ರವಾಗಿ ಇರಬೇಕು. ಓದುಗಳಾಗಿ ವ್ಹಾ ವ್ಹಾ ಎನ್ನಬೇಕು. ಇಷ್ಟೆಲ್ಲಾ ಆದರೆ ಮಾತ್ರವೇ ಬರೆದ ಕಥೆ ತ್ರಪ್ತಿ ತರಲು ಸಾಧ್ಯ. ಹೀಗೆ ನಡೆದ ಘಟನೆಗಳನ್ನು ಅವಲೋಕಿಸುತ್ತಾ, ಪಾತ್ರಗಳನ್ನು ಕಲ್ಪಿಸಿ ಒಂದು ಕರಡು ಪ್ರತಿ ತಯಾರಾಯಿತು. ಅದೇ ಪ್ರತಿ ಅಂತಿಮ ಪ್ರತಿಯಾಗುವಾಗ ಮತ್ತೊಂದಿಷ್ಟು ತಿದ್ದುಪಡಿ. ಇದರ ಮಧ್ಯದಲ್ಲಿ ಬರೆದ ಕಥೆ ಏನೆಂದು ತಿಳಿಯಲು ಅಮ್ಮ ಮಾಡುವ ವ್ಯರ್ಥ ಪ್ರಯತ್ನ. ನನ್ನನ್ನು ನೋಡುತ್ತಾ ಕುಳಿತ ಅಮ್ಮನಿಗೂ ತಾನೂ ಏಕೆ ಏನಾದರೂ ಬರೆಯಬಾರದು ಎನಿಸಿತು. ಆಗ ಕಂಡಿತು ಚಿತ್ರಕ್ಕೆ ಒಂದು ಕವನ ಸ್ಪರ್ಧೆ. "ಏ, ಈ ಚಿತ್ರಕ್ಕೆ ಒಂದು ಕವನ ಸುಲಭವಾಗಿ ಬರೆಯಬಹುದು. ನೀನೇಕೆ ಬರೆಯಬಾರದು?" ನಾನೋ ಕವನದ ವಿಷಯದಲ್ಲಿ ಸೊನ್ನೆ . ಓದಲು ಇಷ್ಟವಿದ್ದರೇನು,ಬರೆಯಲು ಬರಬೇಕಲ್ಲ. ಬೇರೆಯವರು ಬರೆದದ್ದನ್ನು ನೋಡಿ ಎಷ್ಟೋ ಸಲ ಬರೆಯಬೇಕು ಅಂತ ಅನಿಸಿದ್ದಿದೆ. ಪದಗಳು ಮೂಡುವುದಿಲ್ಲ. ಚಿತ್ರ ನೋಡಿದೆ, ಏನೂ ತೋಚಲಿಲ್ಲ "ಅಯ್ಯೋ, ನನ್ನಿಂದಾಗದು. ಇಲ್ಲಿ ಕಥೆಗೆ ಶೀರ್ಷಿಕೆ ಸಿಗದೆ ಪೇಚಾಡುತ್ತಿದ್ದೇನೆ, ಕವನ ಬರೆಯಬೇಕಂತೆ". "ಆಯ್ತು, ನೀನು ಬರೀಬೇಕು ನಾನೇ ಬರ...

ಅಡ್ಡ(nick) ಹೆಸರಿನ ಮಹತ್ವ!

"ಚಿಕ್ಕಮ್ಮ, ನಿನ್ನ ನಿಕ್ ನೇಮ್ ಏನು?" "ನಂಗೆ ನಿಕ್ ನೇಮ್ ಇಲ್ಲ" ಚಟ್ಟಿಗೆ ನೀರೆರೆಯುತ್ತಿದ್ದ ನಾನೆಂದೆ. "ಯಾಕಿಲ್ಲ, ಎಲ್ಲರಿಗೂ ನಿಕ್ ನೇಮ್ ಇರುತ್ತದಂತೆ,ನಿನಗೆ ಯಾಕಿಲ್ಲ? ಹೋಗಲಿ ಅಮ್ಮನಿಗೆ?" ತನ್ವಿ ಪುನಃ ಪ್ರಶ್ನಿಸಿದಳು. " ಅಮ್ಮನಿಗೂ ಇಲ್ಲ, ಯಾಕೆ ಅಂತ ನನ್ನನ್ನು ಕೇಳಬೇಡ, ಅಜ್ಜ ಅಜ್ಜಿಯನ್ನು ಕೇಳು" ನನ್ನತ್ತ ಕನಿಕರದ ನೋಟ ಬೀರಿದವಳು "ಯಾರೂ ಇಡದಿದ್ರೆ ನಾನಿಡ್ತೇನೆ ಆಯ್ತಾ? ಚಿಕ್ಕಿ ಅಂತ ನಿನ್ನ ನಿಕ್ ನೇಮ್" ಎಂದು ಒಳಗೋಡಿದಳು ತನ್ವಿ. ಸರಿ, ಈ ನಿಕ್ ನೇಮ್ ವಿಷಯ ಇಲ್ಲಿಗೆ ನಿಂತಿತಲ್ಲ ಎಂದುಕೊಂಡರೆ ರಾತ್ರಿ ಮತ್ತದೇ ಪ್ರಶ್ನೆ "ಅಜ್ಜ, ನೀವು ನನಗೊಂದು ನಿಕ್ ನೇಮ್ ಇಡಬೇಕು,ಹಾಗೇ ಕರೀಬೇಕು" "ನಿನ್ನ ನಿಕ್ ನೇಮ್ ಪುಳ್ಳಿ ಆಯ್ತಾ?" ಅಪ್ಪನ ಮಾತಿನಿಂದ ಅವಳಿಗೆ ಸಮಾಧಾನ ಆದಂತೆ ಕಾಣಲಿಲ್ಲ."ಪುಟ್ಟ ಅಂತ ಕರೀತೇನೆಲ್ಲ ಅದೇ ನಿನ್ನ ನಿಕ್ ನೇಮ್" ನಾನೆಂದೆ. "ಊಹೂಂ, ಅದಲ್ಲ" ಎಂದವಳು ಸುಮ್ಮನಾದಳು. "ಚಿಕ್ಕಮ್ಮ, ನಾನೊಂದು ಹೇಳ್ತೇನೆ" ರಾತ್ರಿ ಮಲಗಿದವಳೆಂದಳು."ಬೇಗ ಹೇಳು" "ನನ್ನನ್ನು ನಿಕ್ ನೇಮ್ ಇಂದ ಕರೀಬೇಕು ನೀನು" ಅಳುವಂತಿತ್ತು ಅವಳ ಧ್ವನಿ. "ಎಂತಾ ಪಿರಿಪಿರಿ ನಿನ್ನದು ,ನಿಕ್ ನೇಮ್ ನಲ್ಲಿ ಎಂತ ಉಂಟು ಸುಮ್ಮನೆ" "ಉಂಟು, ಛೋಟಾ ಭೀಮ್ ನಲ್ಲಿ ಪ್ರಿನ್ಸೆಸ್ ಇಂದ...