ಪೋಸ್ಟ್‌ಗಳು

ಅಕ್ಟೋಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೂರದ ಬೆಟ್ಟ

ಇಮೇಜ್
"ರ್ರೀ.. ಊಟ ರೆಡಿ, ಊಟ ಮಾಡಿ ಮತ್ತೆ ಟಿವಿ ನೋಡಬಾರದಾ ? ಎಷ್ಟು ಸಲ ಕರೆಯುವುದು ನಿಮ್ಮನ್ನು?" ಹೆಂಡತಿಯ ಕರೆಗೆ ಕಿಡಿ ಕಿಡಿಯಾದ ಸಂದೀಪ "ಆಯ್ತು ಮಾರ್ರಾಯ್ತಿ ಬರ್ತೇನೆ. ನನ್ನಷ್ಟಕ್ಕೆ ಇರಲಿಕ್ಕೂ ಬಿಡುವುದಿಲ್ಲಲ್ಲ ನೀನು " ಎಂದು ಗೊಣಗುತ್ತಾ  ಬಂದು ಸರಸರನೆ ಊಟ ಮುಗಿಸಿ ಮತ್ತೆ ಟಿವಿ ನೋಡತೊಡಗಿದ. "ಏನಾಗಿದೆ ಇವರಿಗೆ? ಸರಿಯಾಗಿ ಮುಖ ಕೊಟ್ಟು ಮಾತೂ ಆಡುವುದಿಲ್ಲ. ಆಫೀಸಿಗೆ ಹೋಗಿ ಬರುವುದು, ಟಿವಿ ಮುಂದೆ ಕೂತ್ಕೊಳ್ಳೋದು ಎರಡೇ ಕೆಲಸ. ಮನೆಯಲ್ಲಿ ಹೆಂಡತಿ ಅಂತ ಒಂದು ಪ್ರಾಣಿ ಇದೆ ಅಂತಲೂ ಗೊತ್ತಿಲ್ಲ ಇವರಿಗೆ" ಮನಸ್ಸಿನಲ್ಲಿಯೇ ಗೊಣಗಿಕೊಂಡಳು ವಸುಧಾ.                           ವಸುಧಾ ಡಬಲ್ ಗ್ರಾಜುವೇಟ್.  ಮದುವೆ  ಆದ ನಂತರ ಕೆಲಸಕ್ಕೆ ಹೋಗದೆ ಗಂಡ, ಸಂಸಾರ ಅಂತ ಮನೆಯಲ್ಲಿ ಉಳಿದು ಬಿಟ್ಟಳು.   ಬಿಡುವಿನ ವೇಳೆಯಲ್ಲಿ ಸಂಗೀತ, ಹೊಲಿಗೆ ಅಂತ ಹವ್ಯಾಸಗಳನ್ನು ಬೆಳೆಸಿಕೊಂಡಳು. ಸಂದೀಪನೂ  ಇದಕ್ಕೆ  ತಕರಾರು ತೆಗೆದಿರಲಿಲ್ಲ. .  ಒಂದು ದಿನ ತನ್ನ ಸಹೋದ್ಯೋಗಿ ಮನೆಗೆ ಊಟಕ್ಕೆ ಹೋದ ಸಂದೀಪ ಆತನ ಸಹೋದ್ಯೋಗಿಯ ಹೆಂಡತಿ ಸುರಭಿಯನ್ನು ಭೇಟಿ ಮಾಡಿದ. ಸುರಭಿ ಕೆಲಸಕ್ಕೆ ಹೋಗುವ ಹೆಣ್ಣುಮಗಳು. ಸಹಜವಾಗಿಯೇ ಗಂಡಸರಿಗೆ ಸರಿಸಮನಾಗಿ ನಿಂತು ಎಲ್ಲ ಕೆಲಸಗಳನ್ನು ಜಾಣ್ಮೆಯಿಂದ ನಿಭಾಯಿಸುತ್ತಿ...

ಮರಳಿ ಬಾ ಬಾಲ್ಯವೇ..

ಇಮೇಜ್
ಹೀಗೆ ಯಾರದೋ ಸಾಮಾಜಿಕ ಜಾಲತಾಣದ ಪುಟಗಳನ್ನು ಕ್ಲಿಕ್ಕಿಸುತ್ತಿರುವಾಗ ಸುಭದ್ರಾ ಕುಮಾರಿ ಚೌಹಾಣರ ಕವಿತೆಯ ಸಾಲು  ಓದಲು ಸಿಕ್ಕಿತು.         ಬಾರ್ ಬಾರ್ ಆತೀ ಹೇ ಮುಜ್ ಕೋ ಮಧುರ್ ಯಾದ್ ಬಚ್ ಪನ್ ತೇರೀ,          ಗಯಾ ಲೇ ಗಯಾ ತೂ  ಜೀವನ್ ಕೀ ಸಬ್ ಸೇ ಮಸ್ತ್ ಖುಷೀ ಮೇರೀ               ಹೈಸ್ಕೂಲಿನ ದಿನಗಳಲ್ಲಿ ಬಾಯಿಪಾಠ ಮಾಡಿಕೊಳ್ಳುತ್ತಿದ್ದ ಕವಿತೆಯಿದು. ಆಗ ಇದರ ಹಿಂದಿನ ಭಾವದ ಅರಿವಿರಲಿಲ್ಲ. ಏನು ಅರ್ಥಪೂರ್ಣವಾದ ಮಾತುಗಳು ಅವು! ಬಾಲ್ಯವೆಂಬುದು ಒಂದು ಆಹ್ಲಾದಕಾರವಾದ ನೆನಪು. ಅಲ್ಲಿ ದುಗುಡಗಳಿಗೆ ಆಸ್ಪದವಿಲ್ಲ, ನಿನ್ನೆ ನಾಳೆಗಳ ಬಗೆಗಿನ ವ್ಯಥೆಯಿಲ್ಲ.  ನಾನು ಹೋದದ್ದು ಸರಕಾರೀ ಕನ್ನಡ ಮಾಧ್ಯಮ ಶಾಲೆಗೆ. ಅವು ಪ್ರಾಥಮಿಕ ಶಾಲೆಯ ದಿನಗಳು. ಆಗೆಲ್ಲ ಈಗಿನಂತೆ ಕುರ್ಚಿ ಮೇಜುಗಳ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ತಗ್ಗಿನ ಬೆಂಚುಗಳು. ಕುಳಿತುಕೊಳ್ಳುವುದು,ಬರೆಯುವುದು ಏನಿದ್ದರೂ ಅದರ ಮೇಲೆಯೇ. ಶಾಲೆಗೆ ಎಂದು ಹೊರಟು ನಿಂತರೆ ನಮ್ಮ ಮನೆಯ ನಾಯಿ ಟಾಮಿ ಕೂಡ ಹೊರಟು ನಿಲ್ಲುತ್ತಿತ್ತು. ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾದ ನನ್ನನ್ನು ಕಂಡರೆ ಅದಕ್ಕೆ ವಿಶೇಷ ಕಾಳಜಿ . "ಏ ನೋಡಾ, ನಿ...