ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಾನಕಿ ಮತ್ತು ಅವಳ ನಾಯಿ

ಬೆಳಗ್ಗಿನ ಉಪಹಾರ ಮುಗಿಸಿ ಎಂದಿನಂತೆ ಹೊರಗೆ ಬಂದು ನೋಡುತ್ತೇನೆ   ಜಾನಕಿಯ ನಾಯಿ ನೆರೆ ಮನೆಗೆ ಬಂದಿದೆ. “ಇದು ಹೇಗೆ ಸಾಧ್ಯ? ಜಾನಕಿ ಇಲ್ಲವಲ್ಲ, ಮತ್ತೆ ಅವಳ ನಾಯಿ ಹೇಗೆ ಬಂತು?” ಸೂಕ್ಷ್ಮವಾಗಿ ಗಮನಿಸಿದಾಗ ಜಾನಕಿ ನಿಂತಿರುವುದು ಕಂಡಿತು. ಇಲ್ಲಿದೆ ಜಾನಕಿ ನಾಯಿ ಬಂದಿರುವ ಗುಟ್ಟು. “ಅವಳು ಬರದೆ ತಿಂಗಳಾಯಿತಲ್ಲ, ಇವತ್ತು ಬಂದಳೇನು?” ಎಂದುಕೊಂಡೆ. ಜಾನಕಿ ನೆರೆಮನೆಗೆ ಬರುವ ಕೆಲಸದವಳು. ಅವಳೊಂದಿಗೆ ಬಂದು, ಅವಳೊಡನೇ ಇದ್ದು,ಸಂಜೆ ಯಥಾವತ್ ಅವಳೊಡನೇ ಹಿಂತಿರುಗುವುದು ಅವಳ ನಾಯಿಯ ನಿತ್ಯದ ದಿನಚರಿ. ಇಂತಿಪ್ಪ ಜಾನಕಿಯ ನಾಯಿಯೇನು ಪೊಮೊರಿಯನ್,ಲ್ಯಾಬ್ರಡಾರ್, ಜರ್ಮನ್ ಶೆಫ಼ರ್ಡ್ ಅಥವಾ ಇನ್ನಿತರ ಹೆಸರುವಾಸಿ ತಳಿಯದ್ದಲ್ಲ. ಪಕ್ಕಾ ಲೋಕಲ್ ಕಂತ್ರಿ ನಾಯಿ. ಮುದ್ದು ಮುದ್ದಾಗಿ ಇರುವುದೇ ಎಂದರೆ ಅದೂ ಇಲ್ಲ. ಆದರೆ ಸ್ವಾಮಿ ನಿಷ್ಠೆಯ ವಿಷಯದಲ್ಲಿ ಮಾತ್ರ ಯಾವ ತಳಿಯ ನಾಯಿಗೂ ಕಮ್ಮಿ ಇಲ್ಲ ಎನ್ನಬಹುದು. ತನ್ನ ಒಡತಿ ಕೆಲಸಕ್ಕೆಂದು  ಎಲ್ಲಿ ಹೋಗುತ್ತಾಳೋ ಆ ಮನೆಯೇ ಅದರ ತಾತ್ಕಾಲಿಕ ವಾಸಸ್ಥಾನ.   ಶಿಸ್ತಿನ ವಿಷಯದಲ್ಲಿ ಜಾನಕಿಯ ನಾಯಿ ತುಂಬಾ ಕಟ್ಟುನಿಟ್ಟು. ತನ್ನ ಒಡತಿಯನ್ನು ಬಿಟ್ಟು ಒಂದಿಂಚೂ ಅತ್ತಿತ್ತ ಸರಿಯುವುದಿಲ್ಲ. ಕಣ್ಣಂಚಿನಲ್ಲಿ ಸನ್ನೆ ಮಾಡಿ ಸ್ನೇಹಿತೆಯನ್ನು(ನಾಯಿ) ತನ್ನ ಬಳಿಗೆ ಕರೆಸಿಕೊಂಡು ಚೂರು ಹೊತ್ತು ಆಟ ಆಡಿ, ನಂತರ ನಿದ್ದೆ ಹೋಗುತ್ತದೆ.             ...