ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಪತ್ಬಾಂಧವ

ಇಮೇಜ್
ನಾಯಿ ಒಂದೇ ಸಮನೆ ಬೊಗಳಲಾರಂಭಿಸಿತು. ಯಾರಿರಬಹುದೆಂದು ಬಾಗಿಲು ತೆರೆದು ನೋಡಿದಳು ವಿನಯ.  ಅಂಚೆಯವನು ಪತ್ರವೊಂದನ್ನು ಇರಿಸಿ ಹೋಗಿದ್ದ. ತೆರೆದು ನೋಡಿದಳು. ಖ್ಯಾತ ಲೇಖಕ ದಿವಾಣಜಿ ಅವರ ಜನ್ಮ ದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಾಗಿತ್ತು. ಅದರೊಂದಿಗೆ ಇರಿಸಿದ್ದ ಪತ್ರವನ್ನು ಬಿಡಿಸಿ ಓದಿದಳು. “ಕು| ವಿನಯ ಅವರು ದಿವಂಗತ ದಿವಾಣಜಿ ಅವರ ಸ್ಮರಣೆಯ ಪ್ರಯುಕ್ತ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನವನ್ನು ಗಳಿಸಿದ್ದಾರೆ. ಸಮಾರಂಭಕ್ಕೆ ಬಂದು ಸನ್ಮಾನಾದಿಗಳನ್ನು ಸ್ವೀಕಾರ ಮಾಡಬೇಕಾಗಿ ವಿನಂತಿ”. “ಅಮ್ಮಾ.. ನಾನು ಬರೆದು ಕಳಿಸಿದ ಕಥೆಗೆ ಬಹುಮಾನ ಬಂದಿದೆ” ಸಂತಸದಿಂದ ವಿನಯಳ ಸ್ವರ ದೊಡ್ಡದಾಯಿತು. “ಹೌದಾ? ಎಷ್ಟನೇ ಬಹುಮಾನ? ಎಲ್ಲಿ ಕೊಡ್ತಾರೆ? ಯಾವಾಗ?” ಪ್ರಶ್ನೆಗಳ ಸುರಿಮಳೆಗೈದ ವಿನಯಳ ತಾಯಿ ಕವಿತಾ, ಪತ್ರವನ್ನು ಕೈಯಿಂದ ಹಿಡಿದೆಳೆದು ಓದಲಾರಂಭಿಸಿದಳು. “ಓ! ತೃತೀಯ ಬಹುಮಾನ ಬಂದಿದೆ. ಪರ್ವಾಗಿಲ್ಲ. ಆದ್ರೆ ಕಾರ್ಯಕ್ರಮದ ಸ್ಥಳ ಮಾತ್ರ ಮುಂಬಯಿ, ಡೊಂಬಿವಿಲಿ ಪೂರ್ವ ಅಂತ ಉಂಟಲ್ಲ. ಹೇಗೆ ಹೋಗುವುದು? ಅಲ್ಲಿ ನಮ್ಮ ಗುರ್ತದವರು ಅಂತ ಯಾರೂ ಇಲ್ಲಲ್ಲ. ಅಪ್ಪನತ್ರ ಕೇಳ್ಬೇಕಷ್ಟೇ”. ಅಷ್ಟು ಹೇಳಿದ್ದೇ ತಡ ವಿನಯಳ ಉತ್ಸಾಹ ಇಳಿಯಿತು. “ಹೌದಲ್ಲ, ಅಂಜನಕ್ಕ ಇದ್ದಿದ್ರೆ ಒಳ್ಳೇದಿತ್ತು. ಆದ್ರೆ ಅವಳು ಮುಂಬೈಯಿಂದ ಯು.ಎಸ್ ಹೋದಳಲ್ಲಾ" ಮನದಲ್ಲಿ ಅಂದುಕೊಂಡಳು. “ಅಪ್ಪನತ್ರ ಕಾಮತ್ ಅವರತ್ರ ಕೇಳಲ...