ಪೋಸ್ಟ್‌ಗಳು

ಡಿಸೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮತ್ಸ್ಯಲೋಕದಲ್ಲಿ ಒಂದು ದಿನ!

ಇಮೇಜ್
ದೇವಸ್ಥಾನಕ್ಕೆ ಹೋಗದೆ  ತುಂಬಾ ದಿನಗಳಾಗಿತ್ತು. ಎಲ್ಲಿಗಾದರೂ ಹೋಗಬೇಕು, ಎಲ್ಲಿಗೆ ಎಂದು ಒಂದಿಷ್ಟು ಸ್ಥಳಗಳ ಚರ್ಚೆಯಾಯಿತು.  ಕಾರಿಂಜ? ಉಹೂಂ , ಈ ಬಿಸಿಲಿಗೆ ಮೆಟ್ಟಿಲು ಹತ್ತಿ ಇಳಿಯುವುದು ಬೇಡ ಎಂದಳು ಅಮ್ಮ.  ಸುರಿಯ, ಕಟೀಲು, ಧರ್ಮಸ್ಥಳ, ಸೌತಡ್ಕ  ಯಾವುದಾದರೂ ಒಂದಕ್ಕೆ ಹೋಗೋಣ ಎಂದಳು. "ಹೋದಲ್ಲಿಗೆ ಎಷ್ಟು ಸಲ ಹೋಗುವುದು, ಉಹೂಂ ಬೇಡ" ಎಂದೆ ನಾನು. ಹೀಗೆ ಯಾವುದೋ ಪುಸ್ತಕ ತಿರುವಿ ಹಾಕುತ್ತಿದ್ದಾಗ ಶಿಶಿಲೇಶ್ವರ ದೇವಸ್ಥಾನದ ಬಗೆಗಿನ ವಿವರಗಳು ಕಂಡವು. "ಇದ್ಯಾವ ದೇವಸ್ಥಾನ? ನಾವು ಹೋಗಲೇ ಇಲ್ಲವಲ್ಲ ಒಂದು ಸಲವೂ?" ನಾನೆಂದಾಗ  "ಇಲ್ಲ, ತುಂಬಾ ವರ್ಷಗಳ ಹಿಂದೆ ಹೋಗಿದ್ದ ನೆನಪು " ಎಂದಳು ಅಮ್ಮ. ಅಲ್ಲಿನ ನದಿ,ತೂಗುಸೇತುವೆ, ಮುಖ್ಯವಾಗಿ ಮೀನುಗಳು    ಅದಾಗಲೇ ನನ್ನ ಮನಸ್ಸನ್ನು ಆಕರ್ಷಿಸಿದ್ದವು. ಸರಿ, ಚಿಕ್ಕದಾಗಿ ಒಂದು ಪಿಕ್ನಿಕ್ ಆದ ಹಾಗೆ ಆಯ್ತು, ಅಲ್ಲಿಗೇ  ಹೋಗುವುದೆಂದು ತೀರ್ಮಾನವಾಯಿತು. ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ  ಶಿಶಿಲ ಎಂಬ ಗ್ರಾಮದಲ್ಲಿರುವ ಶ್ರೀ ಶಿಶಿಲೇಶ್ವರ ದೇವಸ್ಥಾನ, ಧರ್ಮಸ್ಥಳದಿಂದ ಸುಮಾರು ಮೂವತ್ತೆರಡು ಕಿ.ಮೀ ದೂರದಲ್ಲಿದೆ.  ಮರುದಿನ  ಬೆಳಿಗ್ಗೆ ಒಂಭತ್ತಕ್ಕೆ ಮನೆಯಿಂದ ಹೊರಟು, ಅಲ್ಲಿಗೆ ತಲುಪುವಾಗ  ಗಂಟೆ ಹತ್ತೂಕಾಲು. ಹೊರಗಿನ ಜಗತ್ತು ಮತ್ತೆ ದೇವಸ್ಥಾನದ ಪರಿಸರದ ಮಧ್ಯೆ ಹರ...

ಕಿಟಕಿ ಬದಿಯ ಸೀಟಿನ ಮ್ಯಾಜಿಕ್

ಇಮೇಜ್
                                       ಕಿಟಕಿ ಬದಿಯ ಸೀಟು ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕಿಟಕಿ  ಬದಿಯ ಸೀಟಿನ ಮೇಲೆ ಏನೋ  ಆಕರ್ಷಣೆ .  ಮಕ್ಕಳು ಈ ಸೀಟಿಗೆ ಜಗಳವಾಡಿದರೆ, ದೊಡ್ಡವರು "ನನಗೆ ಅಲ್ಲೇ ಬೇಕು ಅಂತೇನಿಲ್ಲಪ್ಪ, ಎಲ್ಲಾದ್ರೂ ಸರಿ" ಎಂದರೂ ಕಣ್ಣುಗಳು ಮಾತ್ರ ಅಲ್ಲೇ ನೆಟ್ಟಿರುತ್ತವೆ. ಇನ್ನು ವಾಕರಿಕೆ  ಮಾಡಿಕೊಳ್ಳುವವರಿಗೆ ಇದು ಹಕ್ಕಿನ ಸ್ಥಳ.  "ನಂಗೆ ಒಮಿಟ್ ಬಂದಂತೆ ಆಗುತ್ತಿದೆ" ಎಂದರೆ ಸಾಕು, "ಸದ್ಯ, ಮೈಗೆ ಮಾಡದಿದ್ದರೆ ಸಾಕು"  ಎಂದುಕೊಂಡು ಕೂಡಲೇ ಕೂತವರು ಜಾಗ ಬಿಟ್ಟು ಕೊಡುತ್ತಾರೆ.  ವೃದ್ಧರಿಗೆ ಗಮ್ಯ ತಲುಪುವವವರೆಗೆ  ನಿದ್ದೆ ಮಾಡುವ ತಾತ್ಕಾಲಿಕ ಜಾಗವಾದರೆ, ಪ್ರೇಮಿಗಳಿಗೆ ಮೊಬೈಲ್ ನಲ್ಲಿ ಪಿಸುಗುಟ್ಟುತ್ತಾ ಮಾತಾಡಲು ಪ್ರಶಸ್ಥವಾದ ಸ್ಥಳ.  ಮೊಬೈಲ್ ನಲ್ಲಿ ಮೆಲ್ಲಗೆ ಮಾತಾಡುವುದು ಒಂದು ವಿದ್ಯೆಯೇ.  ಬಸ್ಸುಗಳ ಹಾರನ್ ಮಧ್ಯೆ, ಅಷ್ಟು ಮೆಲ್ಲಗೆ ಮಾತನಾಡಿದರೆ ಹೇಗೆ ಕೇಳಿಸುತ್ತದೆ ಎಂದು ಆಶ್ಚರ್ಯವಾಗುತ್ತದೆ. ಒಮ್ಮೆ ಏಕಲವ್ಯನಂತೆ, ನಾನೂ ಈ ವಿದ್ಯೆಯನ್ನು ಕಲಿಯಲೇಬೇಕು ಎಂದು ನಿರ್ಧರಿಸಿ  ಅಮ್ಮನಿಗೆ ಫೋನ್ ಮಾಡಿದೆ. ಇಯರ್ ಫೋನ್ ಹಾಕಿ ಸಣ್ಣಗೆ ...