ಪೋಸ್ಟ್‌ಗಳು

ಫೆಬ್ರವರಿ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಂದು ಕನಸಿನ ಕಥೆ

ಇಮೇಜ್
ಬಸ್ಸು ಎಂದಿನಂತೆ ಜನರಿಂದ ತುಂಬಿ ತುಳುಕುತ್ತಿತ್ತು. ಅಂತೂ ಹೇಗೋ ಮಾಡಿ ಸೀಟನ್ನು ಹಿಡಿದಳು ತೇಜಸ್ವಿನಿ. ನಿತ್ಯವೂ ಇದೇ ಗೋಳು. ಆದರೆ ಏನು ಮಾಡುವುದು,ಕಾಲೇಜಿಗೆ ಹೋಗಲು ಇದೇ ಬಸ್ ಆಗಬೇಕು.  "ಇನ್ನೊಂದು ವರ್ಷ ಅಷ್ಟೆ, ಆಮೇಲೆ ಈ ಬಸ್ ಓಡಾಟ ಮುಗೀತದೆ" ಮನದಲ್ಲಿ ಅಂದುಕೊಂಡಳು. ಮುಂದಿನ ಸ್ಟಾಪ್ ನಲ್ಲಿ ಮಗು ವನ್ನೆತ್ತಿಕೊಂಡ ಮಹಿಳೆ ಒಬ್ಬಳು ಬಸ್ ಹತ್ತಿದಳು.  ಸೀಟ್ನಲ್ಲಿ ಕೂತ ತೇಜಸ್ವಿನಿ ಜಾಗ ಬಿಟ್ಟು ಕೊಡಲೆತ್ನಿಸಿದಾಗ ಕುಳಿತು ಕೊಳ್ಳುವಂತೆ ಸನ್ನೆ ಮಾಡಿದ ಮಹಿಳೆ ತನ್ನ ಕೈಯಲ್ಲಿ ದ್ದ ಮಗುವನ್ನು ಅವಳಿಗೆ ಕೊಟ್ಟಳು. ಏನಾಶ್ಚರ್ಯ! ಕಿಂಚಿತ್ತೂ ಕೊಸರಾಡದೆ ತೇಜಸ್ವಿನಿ ತೊಡೆಯಲ್ಲಿ ಕುಳಿತು ಕೊಂಡಿತು. ಅವಳ ಕೂದಲಿನಲ್ಲಿ ಆಟವಾಡತೊಡಗಿತು. "ಎಲ್ಲಿ ಇಳಿಯುವುದು ನೀವು?" ಆ ಮಹಿಳೆಯನ್ನು ವಿಚಾರಿಸಿದಳು. "ಕಾಲೇಜು ಸ್ಟಾಪಿನ ಹಿಂದಿನ ಸ್ಟಾಪ್". ಮತ್ತೇನು ಮಾತನಾಡಲು ತೋಚದೆ ಕಿಟಕಿಯತ್ತ ದೃಷ್ಟಿ ಹಾಯಿಸಿದಳು. ಕಾ ಲೇಜು ತಲುಪಲು ಇನ್ನು ಇಪ್ಪತ್ತು ನಿಮಿಷಗಳು  ಉಳಿದಿದೆ ಎನ್ನುವಷ್ಟರಲ್ಲಿ ಒಂದು ಸ್ಟಾಪ್ ಬಂದಿತು. ತೇಜಸ್ವಿನಿ ನೋಡುತ್ತಿರುವಂತೆ ಆ ಮಹಿಳೆ ಜನ ಜಂಗುಳಿಯ ಮಧ್ಯೆ ತೂರಿ ಮುಂಬಾಗಿಲಿನಿಂದ ಇಳಿದುಬಿಟ್ಟಳು. "ಓಯ್..ನಿಮ್ಮ ಮಗು"  ಹೇಳಲೆತ್ನಿಸಿದರೂ ಗಂಟಲಿನಿಂದ ಸ್ವರ ಬರುತ್ತಿಲ್ಲ. "ಅಯ್ಯೋ, ಇಳಿದು ಬಿಟ್ಟರಲ್ಲ ಏನು ಮಾಡಲಿ, ಬ್ಯಾಗ್ ಮರೆಯುವುದು ಕೇಳಿದ್ದೇನೆ. ಮಗುವನ್ನು ಮರೆತು ಹ...